ADVERTISEMENT

ಬ್ಲೇಡ್ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ: ಸಂಚಾರಿ ಘಟಕ ಪರಿಚಯಿಸಿದ ನೇತ್ರಧಾಮ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:19 IST
Last Updated 19 ಡಿಸೆಂಬರ್ 2025, 14:19 IST
ಬ್ಲೇಡ್‌ ರಹಿತ ಶಸ್ತ್ರಚಿಕಿತ್ಸೆ ನಡೆಸುವ ಸಂಚಾರಿ ಘಟಕಕ್ಕೆ ಡಾ.ಸುಪ್ರಿಯಾ ಶ್ರೀಗಣೇಶ್ ಮತ್ತು ಡಾ.ಶ್ರೀಗಣೇಶ್ ಚಾಲನೆ ನೀಡಿದರು
ಬ್ಲೇಡ್‌ ರಹಿತ ಶಸ್ತ್ರಚಿಕಿತ್ಸೆ ನಡೆಸುವ ಸಂಚಾರಿ ಘಟಕಕ್ಕೆ ಡಾ.ಸುಪ್ರಿಯಾ ಶ್ರೀಗಣೇಶ್ ಮತ್ತು ಡಾ.ಶ್ರೀಗಣೇಶ್ ಚಾಲನೆ ನೀಡಿದರು   

ಬೆಂಗಳೂರು: ಇಲ್ಲಿನ ನೇತ್ರಧಾಮ ಆಸ್ಪತ್ರೆಯು ಬ್ಲೇಡ್‌ ರಹಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸುವ ‘ಝೀಮರ್ ಝಡ್8 ನಿಯೊ’ ಫೆಮ್ಟೋಸೆಕೆಂಡ್ ಲೇಸರ್ ವ್ಯವಸ್ಥೆ ಹೊಂದಿರುವ ಸಂಚಾರಿ ಘಟಕವನ್ನು ಪರಿಚಯಿಸಿದೆ. 

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಈ ಘಟಕಕ್ಕೆ ಚಾಲನೆ ನೀಡಲಾಯಿತು. ಪ್ರಾಯೋಗಿಕ ಹಂತದಲ್ಲಿ ಈ ವ್ಯವಸ್ಥೆಯಡಿ 900ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ‘ಝೀಮರ್ ಝಡ್8 ನಿಯೊ’ ತಂತ್ರಜ್ಞಾನ ಆಧಾರಿತ ಫೆಮ್ಟೋಸೆಕೆಂಡ್ ಲೇಸರ್‌ ನೆರವಿನಿಂದ ಕಣ್ಣಿನ ಪೊರೆ ಸೇರಿ ವಿವಿಧ ಶಸ್ತ್ರಚಿಕಿತ್ಸೆ ನಡೆಸಬಹುದು. ಇದು ಸುರಕ್ಷಿತ ವಿಧಾನ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು. 

ನೇತ್ರಧಾಮದ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಸುಪ್ರಿಯಾ ಶ್ರೀಗಣೇಶ್, ‘ಸುರಕ್ಷಿತ ಮತ್ತು ನಿಖರ ಶಸ್ತ್ರಚಿಕಿತ್ಸೆಗೆ ಈ ತಂತ್ರಜ್ಞಾನ ಸಹಕಾರಿ. ಬ್ಲೇಡ್‌ ರಹಿತ ಈ ಶಸ್ತ್ರಚಿಕಿತ್ಸೆಯು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಹೋಲಿಸಿದಲ್ಲಿ ನೋವು ರಹಿತವಾಗಿರುತ್ತದೆ. ಹೆಚ್ಚಿನ ವಿಶ್ರಾಂತಿಯ ಅಗತ್ಯತೆಯೂ ಇರುವುದಿಲ್ಲ’ ಎಂದು ಹೇಳಿದರು.

ADVERTISEMENT

ನೇತ್ರಧಾಮದ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಗಣೇಶ್, ‘ಹೊಸ ತಂತ್ರಜ್ಞಾನದ ಯಂತ್ರವು ಬೆಂಗಳೂರಿನ ಮೂರು, ಮೈಸೂರಿನ ಒಂದು ಸೇರಿ ಸಂಸ್ಥೆಯ ಐದು ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.