ADVERTISEMENT

ಹೊಸ ವರ್ಷ ಆಚರಣೆ | ಸಮಯೋಚಿತವಾಗಿ ವರ್ತಿಸಿ: ಬೌನ್ಸರ್‌ಗಳಿಗೆ ಡಿಸಿಪಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2024, 15:40 IST
Last Updated 15 ಡಿಸೆಂಬರ್ 2024, 15:40 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

– ಐಸ್ಟಾಕ್ ಚಿತ್ರ

ಬೆಂಗಳೂರು: ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಕ್ಲಬ್, ಪಬ್​​ಗಳಲ್ಲಿ ನಿಯೋಜಿಸುವ ಬೌನ್ಸರ್‌ಗಳೊಂದಿಗೆ ಹೊಸ ವರ್ಷ ಆಚರಣೆ ಅಂಗವಾಗಿ ನಗರ ಪೊಲೀಸರು ಸಭೆ ನಡೆಸಿದ್ದಾರೆ.

ADVERTISEMENT

ನಗರದ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿರುವ ಕ್ಲಬ್, ಪಬ್​ಗಳಲ್ಲಿನ ಬೌನ್ಸರ್​​ಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಡಿಸಿಪಿ ಎಚ್.ಟಿ. ಶೇಖರ್ ನಿರ್ದೇಶನ ನೀಡಿದ್ದಾರೆ.

ಹೊಸ ವರ್ಷಾಚರಣೆಗೆ ಬಾರ್ ಅಂಡ್ ರೆಸ್ಟೋರೆಂಟ್​​ಗೆ ಬರುವ ಯುವ ಜನರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಮದ್ಯದ ಅಮಲಿನಲ್ಲಿ ಸಾರ್ವಜನಿಕರು ಅಸಭ್ಯ ವರ್ತನೆ ತೋರಿದ್ದಲ್ಲಿ ಅವರನ್ನು ಪೊಲೀಸರಿಗೆ ಹೇಗೆ ಒಪ್ಪಿಸಬೇಕು ಎಂಬುದರ ಬಗ್ಗೆ ಸಭೆ ನಡೆಸಲಾಗಿದೆ.

ಕೇಂದ್ರ ವಿಭಾಗದ ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರು, ಪಾರ್ಟಿ ಹಾಲ್ ಹಾಗೂ ಖಾಸಗಿ ಹೋಟೆಲ್ ಮ್ಯಾನೇಜರ್​​ಗಳ ಜೊತೆಗೂ ಸಭೆ ನಡೆಸಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಮಾಲೋಚಿಸಿದರು. ಹೊಸ ವರ್ಷಕ್ಕೆ ಮಾರ್ಗಸೂಚಿಗಳ ಪಾಲನೆ ಜೊತೆಗೆ ಹೇಗೆ ಪಾರ್ಟಿ ಆಯೋಜನೆ ಮಾಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗಿದೆ.

'ಹೊಸ ವರ್ಷದ ಅಂಗವಾಗಿ ಬೌನ್ಸರ್​ಗಳೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಅನುಚಿತವಾಗಿ ವರ್ತಿಸುವ ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗದೇ, ಸಮಯೋಚಿತವಾಗಿ ಹೇಗೆ ವರ್ತಿಸಬೇಕು ಎಂಬುದರ ಬಗ್ಗೆ ತಿಳಿಸಲಾಗಿದೆ’ ಎಂದು ಈ ಡಿಸಿಪಿ ಎಚ್‌.ಟಿ. ಶೇಖರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.