ADVERTISEMENT

'ಜನರಿಗೆ ಮಾಧ್ಯಮಗಳಿಂದ ಆರೋಗ್ಯ ಶಿಕ್ಷಣ'

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 18:58 IST
Last Updated 18 ಜುಲೈ 2020, 18:58 IST

ಬೆಂಗಳೂರು: ‘ಕೊರೊನಾ ಬಂದ ನಂತರ ದೇಶದ ಜನರಿಗೆ ಮಾಧ್ಯಮಗಳು ಅಗಾಧವಾಗಿ ಆರೋಗ್ಯ ಶಿಕ್ಷಣ ನೀಡುತ್ತಿವೆ. ಮಾಧ್ಯಮಗಳು ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ’ ಎಂದು ನಿಮ್ಹಾನ್ಸ್ ನ ಮನೋವೈದ್ಯವಿಜ್ಞಾದ ಪ್ರಾಧ್ಯಾಪಕ ಎಸ್.ಕೆ.ಚತುರ್ವೇದಿ ತಿಳಿಸಿದರು.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ವತಿಯಿಂದ ‘ಕೋವಿಡ್-19ರ ಸಂದರ್ಭದಲ್ಲಿ ಸ್ಥಿತಿಸ್ಥಾಪಕ ಸಮುದಾಯ ನಿರ್ಮಾಣದಲ್ಲಿ ಮಾಧ್ಯಮಗಳ ಕ್ರಮ’ ಕುರಿತು ಶನಿವಾರ ಹಮ್ಮಿಕೊಂಡಿದ್ದ ವೆಬಿನಾರ್ ನಲ್ಲಿ ಅವರು ಮಾತನಾಡಿದರು.

‘ಕೊರೊನಾ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವೃತ್ತಿಪರರಿಗೆ ಒತ್ತಡ ಹೆಚ್ಚಾಗಿದ್ದು, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಸವಾಲುಗಳನ್ನು ಸ್ವೀಕರಿಸುತ್ತಾ ವೃತ್ತಿಯಲ್ಲಿ ಮುಂದುವರಿಯುತ್ತಿದ್ದಾರೆ. ಇವರು ವ್ಯಾಯಾಮ, ಯೋಗಾಭ್ಯಾಸ ಮಾಡುವ ಮೂಲಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕಿದೆ. ಈಗ ಎಲ್ಲವೂ ಮನೆಯಿಂದಲೇ ನಡೆಯುತ್ತಿದೆ. ಆದರೆ, ಮನೆಯ ಮೂಲ ಸ್ವರೂಪ ಸಂಪೂರ್ಣ ಬದಲಾಗಿದೆ' ಎಂದರು.

ADVERTISEMENT

ನಿಮ್ಹಾನ್ಸ್ ನಿರ್ದೇಶಕ ಬಿ.ಎನ್.ಗಂಗಾಧರ್, ‘ಕೊರೊನಾದಿಂದ ಪಾರಾಗಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಮಾಹಿತಿ ಮಾಧ್ಯಮಗಳಿಂದಲೇ ಜನರಿಗೆ ತಲುಪಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.