ADVERTISEMENT

ಶುಶ್ರೂಷಕರ ಅಂತರಂಗ | ಸಂಕಷ್ಟದಲ್ಲಿ ಸೇವೆ ಒದಗಿಸಿದ ಸಮಾಧಾನ: ಗೀತಾ

​ಪ್ರಜಾವಾಣಿ ವಾರ್ತೆ
Published 11 ಮೇ 2021, 21:50 IST
Last Updated 11 ಮೇ 2021, 21:50 IST
ಗೀತಾ
ಗೀತಾ   

ಬೆಂಗಳೂರು: ‘ಕೋವಿಡ್‌ ಪೂರ್ವದ ಪರಿಸ್ಥಿತಿಗೆ ಹೋಲಿಸಿದಲ್ಲಿ ಈಗ ವಿವಿಧ ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಿ ಸೇವೆ ನೀಡಬೇಕಾಗಿದೆ. ಈ ಸಂದರ್ಭದಲ್ಲಿ ಭಯಪಟ್ಟು ಹಿಂದೇಟು ಹಾಕಿದರೆ ನಮ್ಮ ವೃತ್ತಿಗೆ ಅರ್ಥ ಇರುವುದಿಲ್ಲ. ಪ್ರತಿಯೊಬ್ಬರಿಗೂ ಕುಟುಂಬ ಇರುತ್ತದೆ. ಆದರೆ, ಈಗ ರೋಗಿಗಳಿಗೆ ಉತ್ತಮ ಆರೈಕೆ ಹಾಗೂ ರೋಗದ ವಿರುದ್ಧದ ಹೋರಾಟ ನಮ್ಮ ಆದ್ಯತೆಯಾಗಿದೆ.’

‘ಕೋವಿಡ್‌ ಮೊದಲನೆ ಅಲೆಗೆ ಹೋಲಿಸಿದರೆ ಎರಡನೇ ಅಲೆ ಹೆಚ್ಚಿನ ತೀವ್ರತೆ ಹೊಂದಿದೆ. ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ನಮ್ಮ ಜತಗೆ ಕುಟುಂಬದ ಸದಸ್ಯರಿಗೆ ಕೂಡ ಅಪಾಯ ಇರಲಿದೆ. ಆರು ಗಂಟೆಗೂ ಅಧಿಕ ಅವಧಿ ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ ಕಿಟ್) ಧರಿಸಿಯೇ ಸೇವೆ ನೀಡಬೇಕಾಗುತ್ತದೆ’

‘ಹಾಗಾಗಿ, ಮನೆಯಿಂದ ಹೊರಡುವಾಗಲೇ ಸಾಕಷ್ಟು ನೀರು ಹಾಗೂ ತಿಂಡಿಯನ್ನು ಸೇವಿಸಿ ಹೊರಡುತ್ತೇವೆ. ಕರ್ತವ್ಯಕ್ಕೆ ಹಾಜರಾದ ಬಳಿಕ ಊಟ–ತಿಂಡಿಗೆ ಸಮಯ ಸಿಗುವುದಿಲ್ಲ. ಆಸ್ಪತ್ರೆಗೆ ದಾಖಲಾದ ಪ್ರತಿಯೊಬ್ಬ ರೋಗಿಯನ್ನೂ ಉಳಿಸಿಕೊಳ್ಳಲು ನಮ್ಮ ಕೈಲಾದ ಪ್ರಯತ್ನವನ್ನು ಮಾಡುತ್ತೇವೆ. ಇದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು.’

ADVERTISEMENT

‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇವೆ. ಕುಟುಂಬದ ಜತೆಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬೇಸರವಿದೆ. ಆದರೆ, ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಪರಿಸ್ಥಿತಿಯಲ್ಲಿ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಂಡು ಸಾಗಬೇಕಾಗಿದೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.