ಅಪೆಕ್ಸ್ ಬ್ಯಾಂಕ್
ಬೆಂಗಳೂರು: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗೆ ಇಬ್ಬರು ಅಧಿಕಾರಿಗಳ ಮಧ್ಯೆ ನಡೆಯುತ್ತಿದ್ದ ಜಟಾಪಟಿ ಅಂತ್ಯಗೊಂಡಿದೆ. ಹಿಂದಿನ ಸಿಇಒ ಸಿ.ಎನ್. ದೇವರಾಜು ಅವರು ಮಂಗಳವಾರ ಕಚೇರಿಯ ಬಾಗಿಲಿನ ಬೀಗ ತೆರೆದು ಕೆಎಎಸ್ ಅಧಿಕಾರಿ ಎಂ.ಕೆ. ಜಗದೀಶ್ ಅವರಿಗೆ ಹಸ್ತಾಂತರ ಮಾಡಿದ್ದಾರೆ.
ಜಗದೀಶ್ ಅವರನ್ನು ಅಪೆಕ್ಸ್ ಬ್ಯಾಂಕ್ ಸಿಇಒ ಹುದ್ದೆಗೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿತ್ತು. ನಿವೃತ್ತಿಯ ಬಳಿಕ ಸಿಇಒ ಹುದ್ದೆಗೆ ಮುರು ನೇಮಕಗೊಂಡಿದ್ದ ದೇವರಾಜು, ಅಧಿಕಾರ ಹಸ್ತಾಂತರಿಸದೇ ಕಚೇರಿಯ ಬಾಗಿಲು ಬಂದ್ ಮಾಡಿ ತೆರಳಿದ್ದರು.
‘ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಸೂಚನೆಯಂತೆ ದೇವರಾಜು ಅವರು ಕಚೇರಿಯ ಬಾಗಿಲು ತೆರೆದು ಜಗದೀಶ್ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಇದರೊಂದಿಗೆ ಅಧಿಕಾರಿಗಳ ಮಧ್ಯೆ ಆರಂಭವಾಗಿದ್ದ ಜಟಾಪಟಿ ಅಂತ್ಯವಾಗಿದೆ’ ಎಂದು ಅಪೆಕ್ಸ್ ಬ್ಯಾಂಕ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.