ADVERTISEMENT

ಒಂದೇ ರಾಷ್ಟ್ರ, ಒಂದೇ ಪಿಂಚಣಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 19:04 IST
Last Updated 22 ಅಕ್ಟೋಬರ್ 2022, 19:04 IST
ರಾಷ್ಟ್ರೀಯ ಹಳೇ ಪಿಂಚಣಿ ಮರುಸ್ಥಾಪನಾ ಸಂಯುಕ್ತರಂಗ, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೊಸ ಪಿಂಚಣಿ ಯೋಜನೆ ರದ್ದುಪಡಿಸಲು ಕೇಂದ್ರ ಸರ್ಕಾರ ಪಿಎಫ್‌ಆರ್‌ಡಿಎ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು
ರಾಷ್ಟ್ರೀಯ ಹಳೇ ಪಿಂಚಣಿ ಮರುಸ್ಥಾಪನಾ ಸಂಯುಕ್ತರಂಗ, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹೊಸ ಪಿಂಚಣಿ ಯೋಜನೆ ರದ್ದುಪಡಿಸಲು ಕೇಂದ್ರ ಸರ್ಕಾರ ಪಿಎಫ್‌ಆರ್‌ಡಿಎ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಆಗ್ರಹಿಸಿದರು   

ಬೆಂಗಳೂರು:ಹೊಸ ಪಿಂಚಣಿ ಯೋಜನೆ ರದ್ದುಪಡಿಸಲು ಕೇಂದ್ರ ಸರ್ಕಾರ ಪಿಎಫ್‌ಆರ್‌ಡಿಎ (ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ) ಕಾಯ್ದೆಗೆ ತಿದ್ದುಪಡಿ ತರ ಬೇಕು ಎಂದು ರಾಷ್ಟ್ರೀಯ ಹಳೇ ಪಿಂಚಣಿ ಮರುಸ್ಥಾಪನಾ ಸಂಯುಕ್ತರಂಗ ಆಗ್ರಹಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸರ್ಕಾರಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ 75 ಲಕ್ಷಕ್ಕೂ ಹೆಚ್ಚು ನೌಕರರು ಹೊಸ ಪಿಂಚಣಿ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಅವರ ಸಂಧ್ಯಾಕಾಲದ ಬದುಕು ಅನಿಶ್ಚಿತತೆಯಿಂದ ಕೂಡಿದೆ. ಮೂರು ದಶಕ ದುಡಿದರೂ ಜೀವನ ಭದ್ರತೆ ಇಲ್ಲ. ಈ ಯೋಜನೆಕೇಂದ್ರ ಸರ್ಕಾರ ಪಿಎಫ್‌ಆರ್‌ಡಿಎ ವ್ಯಾಪ್ತಿಗೆ ಒಳಪಡುತ್ತದೆ. ಈಗಾಗಲೇ ದೇಶದ 3 ರಾಜ್ಯಗಳು ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸುವ ನಿರ್ಧಾರ ಕೈಗೊಂಡರೂ, ನಿರ್ಧಾರ ಜಾರಿಯಾಗಲು, ಅಲ್ಲಿನ ನೌಕರರಿಂದ ಸಂಗ್ರಹಿಸಿದ್ದ ಎನ್‌ಪಿಎಸ್‌ ವಂತಿಕೆ ಮರಳಿಸಲುಪಿಎಫ್‌ಆರ್‌ಡಿಎ ಕಾಯ್ದೆ ಅಡ್ಡಿಯಾಗಿದೆ ಎಂದು ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಹಳೇ ಪಿಂಚಣಿ ಮರುಸ್ಥಾಪನಾ
ಸಂಯುಕ್ತ ರಂಗದ ಅಧ್ಯಕ್ಷ ಬಿ.ಪಿ.ಸಿಂಗ್ ರಾವತ್, ಉಪಾಧ್ಯಕ್ಷ ವಿನೋದ್ ಕನೊಜಿಯಾ, ತೆಲಂಗಾಣ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಪತ್‌ಕುಮಾರ್‌ ಸ್ವಾಮಿ ದೂರಿದರು.

ದೇಶದ ಇತರೆ ರಾಜ್ಯಗಳು ಎನ್‌ಪಿಎಸ್‌ ರದ್ದು ಮಾಡುವ ನಿರ್ಧಾರ ತೆಗೆದುಕೊಂಡರೂ ವಂತಿಗೆ ಹಣ ಹಿಂಪಡೆಯಲು ಅವಕಾಶ ಇರುವುದಿಲ್ಲ.ಕೇಂದ್ರ ಸರ್ಕಾರವು ತಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು. ಎಲ್ಲ ರಾಜ್ಯಗಳ ನೌಕರರಿಗೂ ‘ಒಂದೇ ರಾಷ್ಟ್ರ– ಒಂದೇ ಪಿಂಚಣಿ’ ಯೋಜನೆ ನೀಡಬೇಕು. ಈ ಕಾಯ್ದೆ ವ್ಯಾಪ್ತಿಯಿಂದ ಕೈಬಿಡುವ ಮಸೂ ದೆ ಯನ್ನು ಮಂಡಿಸಬೇಕು. ರಾಷ್ಟ್ರೀಯ ಪಕ್ಷ ಗಳು ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಪಿಎಸ್‌ ರದ್ದು ವಿಷಯ ಅಳವಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.