ADVERTISEMENT

ಜಾಲತಾಣದ ಮೂಲಕ ವೇಶ್ಯಾವಾಟಿಕೆ: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2023, 3:24 IST
Last Updated 17 ಜನವರಿ 2023, 3:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜಾಲತಾಣಗಳಲ್ಲಿ ಜಾಹೀರಾತು ನೀಡಿ ಗ್ರಾಹಕರನ್ನು ಸಂಪರ್ಕಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ್ ಅಲಿಯಾಸ್ ಸಂಜು, ಮಂಜುನಾಥ್ ಅಲಿಯಾಸ್ ಬುಲೆಟ್, ಮಲ್ಲಿಕಾರ್ಜುನಯ್ಯ, ಹನುಮೇಶ್, ಮೋಹನ್ ಹಾಗೂ ರಾಜೇಶ್ ಬಂಧಿತರು.

‘ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ನಗರಕ್ಕೆ ಯುವತಿಯರನ್ನು ಕರೆಸುತ್ತಿದ್ದ ಆರೋಪಿಗಳು, ಪೇಯಿಂಗ್ ಗೆಸ್ಟ್‌ ಕಟ್ಟಡದಲ್ಲಿ ಇರಿಸುತ್ತಿದ್ದರು. ಅವರ ಭಾವಚಿತ್ರಗಳ ಸಮೇತ ಜಾಲತಾಣಗಳಲ್ಲಿ ಜಾಹೀರಾತು ನೀಡಿ, ಗ್ರಾಹಕರನ್ನು ವೇಶ್ಯಾವಾಟಿಕೆಗೆ ಆಕರ್ಷಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಗ್ರಾಹಕರು ಹೇಳಿದ ಸ್ಥಳಗಳಲ್ಲಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದ ಆರೋಪಿಗಳು, ಕಮಿಷನ್ ರೂಪದಲ್ಲಿ ಹಣ ಪಡೆಯುತ್ತಿದ್ದರು. ಜೊತೆಗೆ, ಕೆಲ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನೂ ಆರೋಪಿಗಳು ಸೃಷ್ಟಿಸಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ತಿಳಿಸಿದರು.

‘ಯಾವುದಾದರೂ ನಿರ್ದಿಷ್ಟ ಸ್ಥಳದಲ್ಲಿ ವೇಶ್ಯಾವಾಟಿಕೆ ನಡೆಸಿದರೆ, ಪೊಲೀಸರು ತಮ್ಮನ್ನು ಬಂಧಿಸಬಹುದೆಂಬ ಭಯ ಆರೋಪಿಗಳಲ್ಲಿತ್ತು. ಹೀಗಾಗಿ, ಅವರು ಜಾಲತಾಣದ ಮೂಲಕವಷ್ಟೇ ಗ್ರಾಹಕರನ್ನು ಸಂಪರ್ಕಿಸಿಸುತ್ತಿದ್ದರು. ಗ್ರಾಹಕರು ಹೇಳಿದ್ದ ಸ್ಥಳಕ್ಕೆ ಮಹಿಳೆಯರನ್ನು ಕರೆದೊಯ್ಯುತ್ತಿದ್ದರು. ಜಾಲದಲ್ಲಿ ಸಿಲುಕಿದ್ದ ಮಹಿಳೆಯರನ್ನು ರಕ್ಷಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.