ADVERTISEMENT

ಆನ್‍ಲೈನ್ ಮೂಲಕ ಗ್ರಹಣ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2020, 23:11 IST
Last Updated 17 ಜೂನ್ 2020, 23:11 IST
ಗ್ರಹಣ (ಫೈಲ್ ಚಿತ್ರ)
ಗ್ರಹಣ (ಫೈಲ್ ಚಿತ್ರ)   

ಬೆಂಗಳೂರು: ಇದೇ 21ರಂದು ಸಂಭವಿಸಲಿರುವ ಸೂರ್ಯಗ್ರಹಣ ವೀಕ್ಷಣೆಗೆ ಲಾಕ್‌ಡೌನ್‌ನಿಂದಾಗಿ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ವ್ಯವಸ್ಥೆ ಇರುವುದಿಲ್ಲ. ಬದಲಿಗೆ ಆನ್‍ಲೈನ್ ಮೂಲಕ ಗ್ರಹಣ ವೀಕ್ಷಣೆ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಸಾರ್ವಜನಿಕರು www.taralaya.org ಮೂಲಕ ಸಂಸ್ಥೆಯ ಯೂಟ್ಯೂಬ್ ಹಾಗೂ ಫೇಸ್‍ಬುಕ್ ಪುಟಗಳಿಂದ ಗ್ರಹಣ ವೀಕ್ಷಿಸಬಹುದು. ಬೆಳಿಗ್ಗೆ 10.12ರಿಂದ ಮಧ್ಯಾಹ್ನ 1.31ರವರೆಗೆ ಬೆಂಗಳೂರಿನಲ್ಲಿ ಗ್ರಹಣ ಗೋಚರಿಸಲಿದೆ.

ಗ್ರಹಣ ವೀಕ್ಷಿಸುವವರು ತಾರಾಲಯದ ಪುಸ್ತಕ ಮಳಿಗೆಯಲ್ಲಿ ₹35 ಪಾವತಿಸಿ, ಎರಡು ಸೌರ ಕನ್ನಡಕಗಳನ್ನು ಖರೀದಿಸಬಹುದು. ಜೂ.18ರಿಂದ 20ರವರೆಗೆ ಸೌರ ಕನ್ನಡಕಗಳ ಮಾರಾಟ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.