
ಪ್ರಜಾವಾಣಿ ವಾರ್ತೆ
ಜಿಬಿಎ
ಬೆಂಗಳೂರು: ‘ಮರಣ ಶಾಸನದಂತಿರುವ ಒಂಟಿ ಮನೆ ಯೋಜನೆ ರದ್ದು ಮಾಡಿ, ಬಡವರ ಪ್ರಾಣ ಉಳಿಸಿ’ ಎಂದು ರಾಜ್ಯ ಅಹಿಂದ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಜಿ. ಶ್ರೀನಿವಾಸ್ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2010ರಿಂದ ಇಲ್ಲಿಯವರೆಗೆ ಮೂರು ಸಾವಿರ ಫಲಾನುಭವಿಗಳು ಮೃತಪಟ್ಟಿದ್ದಾರೆ. ಜಿಬಿಎ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಜಿಬಿಎ ಅಸಹಕಾರದಿಂದಾಗಿ, ಸೂರು ನಿರ್ಮಿಸಿಕೊಳ್ಳಬೇಕು ಎಂಬ ಬಡವರ ಕನಸು ಸಮಾಧಿ ಸೇರಿದೆ. ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ’ ಎಂದರು.
‘ಕನಸಿನ ಮನೆ ನಿರ್ಮಿಸಿಕೊಳ್ಳುವ ಆಕಾಂಕ್ಷೆಯಿಂದ ತಾವು ನೆಲಸಿದ್ದ ಜಾಗವನ್ನು ತೆರವುಗೊಳಿಸಿ ಬಾಡಿಗೆ ಮನೆಗಳು ಮತ್ತು ಶೆಡ್‌ಗಳಲ್ಲಿ ವಾಸವಿರುವವರ ಸ್ಥಿತಿ ಶೋಚನೀಯವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.