ADVERTISEMENT

ತಲಘಟ್ಟಪುರ: ಕೆಎಸ್‌ಎಸ್‌ಇಎಂ ಕಾಲೇಜು ಬಳಿ ಕಾಣಿಸಿಕೊಂಡಿರುವ ಚಿರತೆ ಸೆರೆಗೆ ಬೋನ್‌

​ಪ್ರಜಾವಾಣಿ ವಾರ್ತೆ
Published 31 ಮೇ 2025, 19:25 IST
Last Updated 31 ಮೇ 2025, 19:25 IST
<div class="paragraphs"><p>&nbsp; ಚಿರತೆ ಸೆರೆ ಹಿಡಿಯಲು ಇಡಲಾದ&nbsp;ಬೋನ್‌</p></div>

  ಚಿರತೆ ಸೆರೆ ಹಿಡಿಯಲು ಇಡಲಾದ ಬೋನ್‌

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ತಲಘಟ್ಟಪುರದಲ್ಲಿ ಕೆಎಸ್‌ಎಸ್‌ಇಎಂ ಕಾಲೇಜು ಬಳಿ ಕಾಣಿಸಿಕೊಂಡಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ADVERTISEMENT

ಕಾಲೇಜು ಎದುರು ಪೂರ್ವಿಕಾ ವುಡ್‌ ವರ್ಕ್ಸ್‌ ಬಳಿ ಬೆಳಿಗ್ಗೆ ಚಿರತೆ ಓಡಾಡುವುದನ್ನು ನಾಗರಿಕರು ನೋಡಿ ಭಯಗೊಂಡಿದ್ದಾರೆ. ಪೊದೆ ಸಮೀಪದಲ್ಲಿ ಚಿರತೆ ಅಡಗಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಎನ್‌. ಕಾಂಬಳೆ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

‘ಸ್ಥಳೀಯರ ಪ್ರಕಾರ ಪೂರ್ವಿಕಾ ವುಡ್‌ ವರ್ಕ್ಸ್‌ ಬಳಿಯ ಪೊದೆ ಬಳಿ ಚಿರತೆ ಅಡಗಿಕೊಂಡಿರುವ ಸಾಧ್ಯತೆ ಇದೆ. ಈವರೆಗೂ ಚಿರತೆ ಓಡಾಟ ಕಂಡುಬಂದಿಲ್ಲ. ಆದರೂ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಚಿರತೆ ಸೆರೆಗೆ ಮೂರು ಬೋನ್‌ಗಳನ್ನು ಇರಿಸಲಾಗಿದೆ ಹಾಗೂ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜನ ಸಂಚಾರ ಕಡಿಮೆಯಾದ ಬಳಿಕ ರಾತ್ರಿ ಶೋಧ ನಡೆಸಲಾಗುವುದು’ ಎಂದು ಕಾಂಬಳೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.