
ಬೆಂಗಳೂರು: ‘ಲಘು ಉದ್ಯೋಗ್ ಭಾರತಿ’ ಬೆಂಗಳೂರು ಉತ್ತರ ವತಿಯಿಂದ ‘ನಮ್ಮ ಕಾರ್ಖಾನೆ ಎಕ್ಸ್‌ಪೋ 2025’ ಅನ್ನು ಡಿ. 5 ಮತ್ತು 6ರಂದು ಪೀಣ್ಯ ಜಿಮ್ಖಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಣ್ಣ ಉತ್ಪಾದಕರು, ವ್ಯಾಪಾರಸ್ಥರು, ಎಂಎಸ್ಎಂಇ ಸಂಸ್ಥೆಗಳು, ವಿತರಕರು ಹಾಗೂ ಸೇವಾ ಪೂರೈಕೆದಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ, ಸಂಪರ್ಕ ಜಾಲ ಏರ್ಪಡಿಸುವ ಉದ್ದೇಶದಿಂದ ಎಕ್ಸ್‌ಪೋ ಹಮ್ಮಿಕೊಳ್ಳಲಾಗಿದೆ. ಖರೀದಿದಾರರು ಮತ್ತು ಮಾರಾಟಗಾರರನ್ನು ಉತ್ತೇಜಿಸಿ, ನವೀನ ಹಾಗೂ ಅವಶ್ಯಕ ಕೈಗಾರಿಕಾ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುವ ಮೂಲಕ ಬೆಂಗಳೂರು ಕೈಗಾರಿಕಾ ಪರಿಸರವನ್ನು ಬಲಪಡಿಸಲಾಗುವುದು ಎಂದು ‘ಲಘು ಉದ್ಯೋಗ್ ಭಾರತಿ’ ಅಧ್ಯಕ್ಷ ಮಯಾಂಕ್ ಕೌಶಿಕ್ ಮಾಹಿತಿ ನೀಡಿದರು.
ಎಂಜಿನಿಯರಿಂಗ್, ವಿದ್ಯುತ್ ಉಪಕರಣಗಳು, ಸಾಧನಗಳು ಮತ್ತು ಯಂತ್ರೋಪಕರಣಗಳು, ಆಟೊಮೇಶನ್, ಸುರಕ್ಷತಾ ಸಾಧನಗಳು, ಲಾಜಿಸ್ಟಿಕ್ಸ್, ಪ್ಯಾಕೇಜಿಂಗ್, ಕಚ್ಚಾ ವಸ್ತುಗಳು ಮತ್ತು ಸಂಬಂಧಿತ ಸೇವೆಗಳಂತಹ ಹಲವು ಕ್ಷೇತ್ರಗಳಿಂದ ಪ್ರದರ್ಶಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾಹಿತಿಗೆ ಸಂಪರ್ಕ ಸಂಖ್ಯೆ: 9845025181
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.