ADVERTISEMENT

ಬೆಂಗಳೂರು | ಪಾನ್‌ ಕಾರ್ಡ್ ಜೋಡಣೆ ನೆಪ: ₹2.32 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 15:31 IST
Last Updated 15 ಅಕ್ಟೋಬರ್ 2023, 15:31 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬ್ಯಾಂಕ್ ಖಾತೆಗೆ ಪಾನ್‌ ಕಾರ್ಡ್ ಜೋಡಣೆ ಮಾಡಬೇಕೆಂದು ಹೇಳಿ ಪ್ರಾಂಶುಪಾಲರೊಬ್ಬರ ಖಾತೆಯಿಂದ ₹ 2.32 ಲಕ್ಷ ವರ್ಗಾಯಿಸಿಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ನಗರದ ಕಾಲೇಜೊಂದರ ಪ್ರಾಂಶುಪಾಲರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ದೂರುದಾರ ಆಕ್ಸಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ‘ನಿಮ್ಮ ಬ್ಯಾಂಕ್ ಖಾತೆಗೆ ಪಾನ್ ಕಾರ್ಡ್ ಜೋಡಣೆ ಮಾಡಿಸಬೇಕು. ಇಲ್ಲದಿದ್ದರೆ, ಖಾತೆ ನಿಷ್ಕ್ರಿಯವಾಗುತ್ತದೆ’ ಎಂಬುದಾಗಿ ದೂರುದಾರರ ಮೊಬೈಲ್‌ಗೆ ಅ. 10ರಂದು ಸಂದೇಶ ಬಂದಿತ್ತು.’

‘ಸಂದೇಶ ನಿಜವೆಂದು ನಂಬಿದ್ದ ದೂರುದಾರ, ಅದರಲ್ಲಿದ್ದ ಲಿಂಕ್ ಒತ್ತಿದ್ದರು. ಅದರಲ್ಲಿರುವ ಮಾಹಿತಿ ಭರ್ತಿ ಮಾಡಿದ್ದರು. ಇದಾದ ಕೂಡಲೇ ದೂರುದಾರರ ಖಾತೆಯಲ್ಲಿದ್ದ ₹ 2.32 ಲಕ್ಷ ಕಡಿತವಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.