ADVERTISEMENT

ಪಂತರಪಾಳ್ಯದಲ್ಲಿ ಪುನೀತ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ

ಬಿಬಿಎಂಪಿ ವತಿಯಿಂದ ಪಂತರಪಾಳ್ಯದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 22:54 IST
Last Updated 23 ಮಾರ್ಚ್ 2023, 22:54 IST
ಪಂತರಪಾಳ್ಯದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಬಿಬಿಎಂಪಿ ವಲಯ ಆಯುಕ್ತ ಡಾ. ಆರ್.ಎಲ್.ದೀಪಕ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌, ಅಶ್ವಿನಿ ಪುನೀತ್ ರಾಜ್‌ಕುಮಾರ್, ವಸತಿ ಸಚಿವ ವಿ. ಸೋಮಣ್ಣ, ನಟ ರಾಘವೇಂದ್ರ ರಾಜ್‌ಕುಮಾರ್‌ ಇದ್ದರು.
ಪಂತರಪಾಳ್ಯದಲ್ಲಿ ಡಾ. ಪುನೀತ್ ರಾಜ್ ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಉದ್ಘಾಟಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ, ಬಿಬಿಎಂಪಿ ವಲಯ ಆಯುಕ್ತ ಡಾ. ಆರ್.ಎಲ್.ದೀಪಕ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಆರ್‌. ರಮೇಶ್‌, ಅಶ್ವಿನಿ ಪುನೀತ್ ರಾಜ್‌ಕುಮಾರ್, ವಸತಿ ಸಚಿವ ವಿ. ಸೋಮಣ್ಣ, ನಟ ರಾಘವೇಂದ್ರ ರಾಜ್‌ಕುಮಾರ್‌ ಇದ್ದರು.   

ಬೆಂಗಳೂರು: ‘ಚುನಾವಣೆ ಸಲುವಾಗಿ ಕೆಲಸ ಮಾಡುವುದು ಒಂದು ಕಡೆಯಾದರೆ, ವಿಶ್ವಾಸ ಇಟ್ಟಿರುವ ಜನರ ಸೇವೆ ಮಾಡಬೇಕು ಎನ್ನುವುದು ಮತ್ತೊಂದು ಕಡೆ. ಸಮಯ ನೋಡಿ ಕೆಲಸ ಮಾಡುವುದು ಕರ್ತವ್ಯ, ಸಮಯಾತೀತವಾಗಿ ಕೆಲಸ ಮಾಡುವುದು ನೈಜ ಸೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಬಿಎಂಪಿ ವತಿಯಿಂದ ನಾಯಂಡಹಳ್ಳಿ ವಾರ್ಡ್‍ನ ಪಂತರಪಾಳ್ಯದಲ್ಲಿನಿರ್ಮಿಸಿರುವ ‌ಡಾ. ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪುನರುಜ್ಜೀವನಗೊಂಡ ನಾಯಂಡಹಳ್ಳಿ ಕೆರೆ ಲೋಕಾರ್ಪಣೆಗೊಳಿಸಿ ಗುರುವಾರ ಮಾತನಾಡಿದರು.

‘ಬೆಂಗಳೂರು ನಮ್ಮ ಹೆಮ್ಮೆ, ಪ್ರತಿಷ್ಠೆ, ಗೌರವ. ಕೆಂಪೇಗೌಡರು ಕಟ್ಟಿರುವ ಬೆಂಗಳೂರು ಹೆಸರನ್ನು ಉಳಿಸುವುದು ನಮ್ಮ ಕರ್ತವ್ಯ. ಬೆಂಗಳೂರಿನ ಬ್ರ್ಯಾಂಡ್ ಉಳಿಸಲು ಎಲ್ಲರೂ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ಸೋಮಣ್ಣ ವಸತಿ ಸಚಿವರಾಗಿ ಕೊಳೆಗೇರಿಗಳಲ್ಲಿ ವಾಸಿಸುವ 3 ಲಕ್ಷಕ್ಕಿಂತ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಿಸಿದ್ದಾರೆ. 85 ಸಾವಿರ ಮನೆಗಳನ್ನು ವಿತರಿಸಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಗುರಿ ಹೊಂದಿದ್ದು, ರಾಜ್ಯದಲ್ಲಿ 5 ಲಕ್ಷ ಮನೆ ಹಂಚಿಕೆ ಮಾಡಲಾಗುತ್ತಿದೆ’ ಎಂದು ನುಡಿದರು.

ಸಚಿವರಾದ ವಿ ಸೋಮಣ್ಣ ಮಾತನಾಡಿ, ‘ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ಮಾದರಿ ಕ್ಷೇತ್ರ
ವಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ಕಾರಣ. ಸ್ನೇಹಕ್ಕೋಸ್ಕರ ಒಂದು ಕ್ಷೇತ್ರಕ್ಕೆ ಒಬ್ಬ ಮುಖ್ಯಮಂತ್ರಿ ಹತ್ತಾರು ಬಾರಿ ಭೇಟಿ ನೀಡಿದ್ದು ನನ್ನ 45 ವರ್ಷಗಳ ರಾಜಕಾರಣ ದಲ್ಲೇ ಮೊದಲು. ಕ್ಷೇತ್ರದಲ್ಲಿ ಒಟ್ಟು 515 ಬೆಡ್ ಗಳ ಅತ್ಯಾಧುನಿಕ ಆಸ್ಪತ್ರೆಗಳು ನಿರ್ಮಾಣವಾಗಿವೆ. ಕೆಲವೇ ದಿನಗಳಲ್ಲಿ ಈ ಆಸ್ಪತ್ರೆ ಸಾರ್ವಜನಿಕರ ಬಳಕೆಗೆ ತೆರೆಯಲಿದೆ’ ಎಂದು ಹೇಳಿದರು.

ಸಚಿವ ಡಾ. ಕೆ.ಸುಧಾಕರ್, ಚಿತ್ರನಟ ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.