ADVERTISEMENT

ಇಂಡಿಗೊ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನ: ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 15:39 IST
Last Updated 2 ಅಕ್ಟೋಬರ್ 2023, 15:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಇಂಡಿಗೊ ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ ಆರೋಪದಡಿ ಪ್ರಯಾಣಿಕ ಸ್ವಪ್ನಿಲ್ ಹೋಲೆ ಅವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ಮಹಾರಾಷ್ಟ್ರದ ನಾಗಪುರ ನಿವಾಸಿ ಸ್ವಪ್ನಿಲ್, ಸೆ. 30ರಂದು ಕೃತ್ಯ ಎಸಗಿದ್ದ. ಇಂಡಿಗೊ ಏರ್‌ಲೈನ್ಸ್ ಕಂಪನಿ ಪ್ರತಿನಿಧಿ ನೀಡಿದ್ದ ದೂರು ಆಧರಿಸಿ ಸ್ವಪ್ನಿಲ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆರೋಪಿ ಸ್ವಪ್ನಿಲ್, ನಾಗಪುರದಿಂದ ಬೆಂಗಳೂರು ಮಾರ್ಗವಾಗಿ ಬ್ಯಾಂಕಾಕ್‌ಗೆ ಇಂಡಿಗೊ 6ಇ–6803 ವಿಮಾನದಲ್ಲಿ ಹೊರಟಿದ್ದ. ಸೀಟ್‌ ನಂಬರ್ ‘5ಇ’ಯಲ್ಲಿ ಕುಳಿತಿದ್ದ. ಪ್ರಯಾಣದ ವೇಳೆಯಲ್ಲಿ ತನ್ನ ಪಕ್ಕದಲ್ಲಿದ್ದ ತುರ್ತು ಬಾಗಿಲು ತೆರೆಯಲು ಯತ್ನಿಸಿದ್ದ.’

‘ಈತನ ಕೃತ್ಯವನ್ನು ನೋಡಿದ್ದ ವಿಮಾನದ ಸಿಬ್ಬಂದಿ, ಸ್ಥಳಕ್ಕೆ ಹೋಗಿ ಬಾಗಿಲು ತೆರೆಯುವುದನ್ನು ತಡೆದಿದ್ದರು. ಘಟನೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಆರೋಪಿಯನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ, ಠಾಣೆಗೆ ಒಪ್ಪಿಸಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

‘ವಿಮಾನ ಪ್ರಯಾಣಿಕರ ಜೀವಕ್ಕೆ ಆಪತ್ತು ತರುವ ಕೃತ್ಯ ಇದಾಗಿದೆ. ಯಾವ ಕಾರಣಕ್ಕೆ ಆರೋಪಿ ಬಾಗಿಲು ತೆರೆಯಲು ಯತ್ನಿಸಿದ್ದ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.