ADVERTISEMENT

‘ಪೇಟಿಎಂ’ ಹೆಸರಿನಲ್ಲಿ ₹ 72 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:24 IST
Last Updated 6 ಸೆಪ್ಟೆಂಬರ್ 2019, 19:24 IST

ಬೆಂಗಳೂರು: ‘ಲಕ್ಕಿ ಡ್ರಾನಲ್ಲಿ ನಿಮ್ಮ ನಂಬರ್‌ಗೆ ಬಹುಮಾನ ಬಂದಿದೆ’ ಎಂದು ಹೇಳಿ ಪೇಟಿಎಂ ಕಂಪನಿ ಹೆಸರಿನಲ್ಲಿ ನಗರದ ಯುವತಿಯೊಬ್ಬರಿಗೆ ಸಂದೇಶ ಕಳುಹಿಸಿದ್ದ ವಂಚಕರು, ಜಿಎಸ್‌ಟಿ ರೂಪದಲ್ಲಿ ₹ 72 ಸಾವಿರ ಪಡೆದುಕೊಂಡು ವಂಚಿಸಿದ್ದಾರೆ.

ಆ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ವೈಟ್‌ಫೀಲ್ಡ್‌ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುವ ಯುವತಿಗೆ, ‘ನೀವು ₹ 12.8 ಲಕ್ಷ ಗೆದ್ದಿದ್ದಿರಾ. ನಿಮ್ಮ ಗುರುತು ಹಾಗೂ ವಿಳಾಸದ ದಾಖಲೆಗಳನ್ನು ಕಳುಹಿಸಿ’ ಎಂದು ವಂಚಕರು ಸಂದೇಶ ಕಳುಹಿಸಿದ್ದರು. ಅದನ್ನು ನಂಬಿದ್ದ ಯುವತಿ, ದಾಖಲೆ ಕಳುಹಿಸಿದ್ದಳು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬಹುಮಾನದ ಹಣ ಬೇಕಾದರೆ ಪೇಟಿಎಂನಲ್ಲಿ ಖಾತೆ ತೆರೆದು ಜಿಎಸ್‌ಟಿ ಪಾವತಿಸಬೇಕು’ ಎಂದು ಆರೋಪಿಗಳು ಹೇಳಿದ್ದರು. ಅದನ್ನೂ ನಂಬಿ ಯುವತಿ ಹಣ ಕಟ್ಟಿದ್ದರು. ಅದಾದ ನಂತರ ಆರೋಪಿಗಳು, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಈ ಬಗ್ಗೆ ಯುವತಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.