
ಬೆಂಗಳೂರು: ಹೊಸ ವರ್ಷದ ಮೊದಲ ದಿನದಂದು ನಗರದಲ್ಲಿ ಪಾದಚಾರಿಗಳ ಸುರಕ್ಷತೆ, ಅವರು ನಡೆದು ಹೋಗಬಹುದಾದ ಮಹತ್ವವನ್ನು ಒತ್ತಿ ಹೇಳುವ ಉದ್ದೇಶದಿಂದ, ವಿಶ್ವದ ಅತಿ ಉದ್ದದ 26 ಕಿ.ಮೀ. ಸಮೂಹ ಪಾದಚಾರಿ ‘ಫುಟ್‌ಪಾತ್ ನಡಿಗೆ’ ನಡೆಯಿತು.
ಗುರುವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾದ ‘ಫುಟ್‌ಪಾತ್ ನಡಿಗೆ’ಯಲ್ಲಿ ಒಂಬತ್ತು ವರ್ಷದಿಂದ 76 ವರ್ಷ ವಯಸ್ಸಿನ 300ಕ್ಕೂ ಹೆಚ್ಚು ನಾಗರಿಕರು/ಪಾದಚಾರಿಗಳು ಭಾಗವಹಿಸಿದ್ದರು. ನಿಗದಿತ ಮಾರ್ಗದಲ್ಲಿ ಸಂಪೂರ್ಣವಾಗಿ ಫುಟ್‌ಪಾತ್‌ಗಳಲ್ಲೇ ನಡೆದು, ಸಂಜೆ 6.30ರವರೆಗೆ 165 ಮಂದಿ 26 ಕಿ.ಮೀ. ದೂರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.
ಆರ್.ವಿ. ರಸ್ತೆ, ಜಯನಗರ, ಸಿದ್ದಾಪುರ, ಲಾಲ್‌ಬಾಗ್, ಕೆ.ಎಚ್. ರಸ್ತೆ, ಕೆ-100 ಮಾರ್ಗ, ಹೊಸೂರು ರಸ್ತೆ, ರಿಚ್ಮಂಡ್ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ಕಬ್ಬನ್ ರಸ್ತೆ, ಹಲಸೂರು ಕೆರೆ, ಕಂಟೋನ್ಮೆಂಟ್ ರೈಲು ನಿಲ್ದಾಣ, ಜಯಮಹಲ್, ಮೇಖ್ರಿ ವೃತ್ತ ಹಾಗೂ ಯಶವಂತಪುರ ಪ್ರದೇಶಗಳಲ್ಲಿ ನಡಿಗೆ ನಡೆಯಿತು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹಾಗೂ ದಕ್ಷಿಣ, ಪಶ್ಚಿಮ ಮತ್ತು ಉತ್ತರ ನಗರ ಪಾಲಿಕೆಗಳ ಆಯುಕ್ತರು ಪಾಲ್ಗೊಂಡಿದ್ದರು.
ವಾಕಲೂರು ಯೋಜನೆಯ ಸಮನ್ವಯಕರಾದ ಅರುಣ್ ಪೈ ಅವರ ನೇತೃತ್ವದಲ್ಲಿ ನಡಿಗೆ ಕಾರ್ಯಕ್ರಮ ನಡೆಯಿತು ಎಂದು ಜಿಬಿಎ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.