
ಪೆರಿಫೆರಲ್ ರಿಂಗ್ ರಸ್ತೆ
(ಸಾಂದರ್ಭಿಕ ಚಿತ್ರ)
ಬೆಂಗಳೂರೂ: ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಷ್ಕೃತ ಮಹಾಯೋಜನೆ–2015ರ ಪ್ರಕಾರ, ಹೊರ ವರ್ತುಲ ರಸ್ತೆಯಿಂದ ಪೆರಿಫೆರಲ್ ರಿಂಗ್ ರಸ್ತೆಗೆ (ಪಿಆರ್‌ಆರ್) ಸಂಪರ್ಕಿಸುವ ರಸ್ತೆ ವಿಸ್ತರಣೆಗೆ ವೇಗ ನೀಡಲು ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸೂಚಿಸಿದರು.
ಮಹದೇವಪುರ, ದೊಡ್ಡನೆಕ್ಕುಂದಿ, ಪಟ್ಟಂದೂರು ಅಗ್ರಹಾರ ಹಾಗೂ ನಾಗೊಂಡನಹಳ್ಳಿ ಮಾರ್ಗವಾಗಿ ಪಿಆರ್‌ಆರ್ ಸಂಪರ್ಕಿಸುವ ಪ್ರಸ್ತಾಪಿತ 24 ಮೀಟರ್ ಅಗಲದ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಬೇಕು. ಸ್ವತ್ತುಗಳ ಮಾಹಿತಿಯನ್ನು ಪಡೆದುಕೊಂಡು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದು ಹೇಳಿದರು.
ಸೀತಾರಾಂಪಾಳ್ಯ ಮೆಟ್ರೊ ನಿಲ್ದಾಣ ಸಮೀಪದಲ್ಲಿ ಕೆಐಎಡಿಬಿಯಿಂದ ಅಭಿವೃದ್ದಿಪಡಿಸಿರುವ ವಿಶೇಷ ವಲಯದಲ್ಲಿನ ಸ್ವತ್ತುಗಳ ಬಳಿ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಐಎಡಿಬಿಯೊಂದಿಗೆ ಸಮನ್ವಯಕ್ಕೆ ಸೂಚಿಸಿದರು. ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ, ಮಾರ್ಚ್ 10ರೊಳಗೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.