ADVERTISEMENT

ಪಿಇಎಸ್‌ ವಿವಿ: ₹3.54 ಕೋಟಿ ವಿದ್ಯಾರ್ಥಿ ವೇತನ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:27 IST
Last Updated 28 ಫೆಬ್ರುವರಿ 2019, 19:27 IST

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯ ಈ ಸೆಮಿಸ್ಟರ್‌ನಲ್ಲಿ 5038 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಟ್ಟು ₹ 3.54 ಕೋಟಿ ವಿದ್ಯಾರ್ಥಿ ವೇತನವನ್ನು ವಿತರಿಸಲಿದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಆರ್‌.ದೊರೆಸ್ವಾಮಿ ಹೇಳಿದರು.

ಎಂಜಿನಿಯರಿಂಗ್‌ ಮತ್ತು ಇತರ ಕೋರ್ಸ್‌ಗಳಲ್ಲಿ ಶೇ 85 ಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ ‘ಸಿಎನ್ಆರ್‌ ರಾವ್‌ ಮೆರಿಟ್‌ ಸ್ಕಾಲರ್‌ಶಿಪ್‌’ ಮತ್ತು ಶೇ 90 ಕ್ಕೂ ಹೆಚ್ಚು ಅಂಕಗಳನ್ನು ಪಡೆದವರಿಗೆ ‘ಎಂ.ಆರ್‌.ದೊರೆಸ್ವಾಮಿ ಮೆರಿಟ್‌ ಸ್ಕಾಲರ್‌ಶಿಪ್‌’ ನೀಡಲಾಗುವುದು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಸಿಎನ್ಆರ್‌ ರಾವ್‌ ಮೆರಿಟ್‌ ಸ್ಕಾಲರ್‌ಶಿಪ್‌ ಅಡಿ ಶೇ 20 ರಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅವರ ಶುಲ್ಕದಲ್ಲಿ ಪ್ರತಿ ಸೆಮಿಸ್ಟರ್‌ಗೆ ಶೇ 15 ರಷ್ಟು (ವರ್ಷಕ್ಕೆ ಶೇ 30) ಶುಲ್ಕವನ್ನು ಮನ್ನಾ ಮಾಡಲಾಗುವುದು. ಎಂಆರ್‌ಡಿ ಮೆರಿಟ್‌ ಸ್ಕಾಲರ್‌ಶಿಪ್‌ ಅಡಿ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳು ಮತ್ತು ಪದವಿ ಕೋರ್ಸ್‌ ಗಳಲ್ಲಿ ಮೂವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಹೇಳಿದರು.

ADVERTISEMENT

‘2018 ರ ಜುಲೈನಿಂದ 2019ರ ಫೆಬ್ರುವರಿಯಲ್ಲಿ 955 ಉದ್ಯೋಗದ ಆಫರ್‌ ಬಂದಿವೆ. 83 ಇಂಟರ್ನ್‌ಶಿಪ್‌ ಆಫರ್‌ ಬಂದಿದೆ. ಇಲ್ಲಿಯವರೆಗೆ 116 ಕಂಪೆನಿಗಳು ಕ್ಯಾಂಪಸ್‌ಗೆ ಭೇಟಿ ನೀಡಿದ್ದವು. ಇದೇ 2 ರಂದು ವಿವಿಯಲ್ಲಿ ಸ್ಕಾಲರ್‌ಶಿಪ್‌ ವಿತರಣೆ ನಡೆಯಲಿದೆ’ ಎಂದು ದೊರೆಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.