ADVERTISEMENT

ಡಿಸೈನ್‌ ಸಂತೆ: ಕರಕುಶಲ ವಸ್ತುಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:27 IST
Last Updated 1 ಡಿಸೆಂಬರ್ 2022, 19:27 IST
ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಡಿಸೈನ್‌ ಸಂತೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಡಿಸೈನ್‌ ಸಂತೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು   

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ (ವಿನ್ಯಾಸ) ‘ಡಿಸೈನ್ ಸಂತೆ’ಯಲ್ಲಿ ಲೈವ್‌ ಆರ್ಟ್‌ ಮಳಿಗೆ ಸೇರಿದಂತೆ ಕುಂಬಾರಿಕೆ ಕಲೆ ಎಲ್ಲರ ಕಣ್ಮನ ಸೆಳೆದವು.

ಡಿಸೈನ್‌ ಸಂತೆಯಲ್ಲಿ ಆಭರಣಗಳು, ಸ್ಟಿಕ್ಕರ್‌ಗಳು, ಪೋಸ್ಟ್‌ಕಾರ್ಡ್‌, ಟಿ–ಶರ್ಟ್‌ ಮತ್ತು ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುವ 10ಕ್ಕೂ ಹೆಚ್ಚು ಮಳಿಗೆಗಳನ್ನು ವಿದ್ಯಾರ್ಥಿಗಳಿಗೇ ಸ್ಥಾಪಿಸಿದ್ದರು. ಇದು ಉದಯೋನ್ಮಖ ಕಲಾವಿದರು ಮತ್ತು ವಿನ್ಯಾಸ ವಿಭಾಗದವರಿಗೆ ಅಮೂಲ್ಯವಾದ ಕಲಿಕೆಯ ಅನುಭವ ನೀಡಿತು. ಈ ಕಾರ್ಯಕ್ರಮದಿಂದ ನಾಯಕತ್ವದ ಕೌಶಲ ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಸಂಘಟನಾ ಸಮಿತಯ ವಿದ್ಯಾರ್ಥಿನಿ ದೇವಾಂಶಿ ತಿಳಿಸಿದರು.

‘ಡಿಸೈನ್ ಸಂತೆ’ಯನ್ನು ವಿದ್ಯಾರ್ಥಿಗಳ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಸಮ- ಕುಲಾಧಿಪತಿ ಪ್ರೊ.ಡಿ.ಜವಾಹರ್ ಅವರ ಪೋಷಕತ್ವದಲ್ಲಿ ಕುಲಪತಿ ಡಾ.ಸೂರ್ಯಪ್ರಸಾದ್ ಜೆ, ಕುಲಸಚಿವರಾದ ಡಾ. ಕೆ ಎಸ್ ಶ್ರೀಧರ್, ವಿದ್ಯಾರ್ಥಿ ವ್ಯವಹಾರಗಳ ಡೀನ್, ಡಾ. ವಿ. ಕೃಷ್ಣ, ಮತ್ತು ವಿನ್ಯಾಸ ವಿಭಾಗದ ನಿರ್ದೇಶಕಿ ಪ್ರೊ.ಚಿತ್ರಾ ವಿಶ್ವನಾಥನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.