ADVERTISEMENT

ಕಲ್ಯಾಣ ಮಂಟಪ, ಸಭಾಂಗಣಗಳಲ್ಲಿ ಪ್ಲಾಸ್ಟಿಕ್‌ ತಟ್ಟೆ, ಲೋಟ ನಿಷೇಧ: ಬಿಬಿಎಂಪಿ ಆದೇಶ

ಬಿಬಿಎಂಪಿಗೂ ಅನ್ವಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 19:05 IST
Last Updated 23 ಡಿಸೆಂಬರ್ 2018, 19:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:ನಗರದ ಎಲ್ಲ ಕಲ್ಯಾಣ ಮಂಟಪ, ಸಭಾಂಗಣಗಳಲ್ಲಿ ಪ್ಲಾಸ್ಟಿಕ್‌ ತಟ್ಟೆ, ಲೋಟ, ಮೇಜಿಗೆ ಹರಡುವ ಪ್ಲಾಸ್ಟಿಕ್‌ ಹಾಳೆ ಬಳಸಬಾರದು ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಕಲ್ಯಾಣ ಮಂಟಪದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯ ಪ್ರಮಾಣದ ಸ್ಟೀಲ್‌, ಸಿರಾಮಿಕ್‌ ಅಥವಾ ಮೆಲಮೈನ್‌ನಿಂದ ತಯಾರಿಸಿದ ಊಟದ ತಟ್ಟೆ, ಲೋಟ, ಚಮಚಗಳನ್ನು ಹೊಂದಿರಬೇಕು. ಕಡ್ಡಾಯವಾಗಿ ನೀರು ಶುದ್ಧೀಕರಣ ಘಟಕವನ್ನು ಹೊಂದಿರಬೇಕು. ಅದರ ನೀರನ್ನೇ ಕುಡಿಯಲು ಕೊಡಬೇಕು. ಇದರಿಂದಾಗಿ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ಕೊಡುವುದನ್ನು ತಪ್ಪಿಸಬಹುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿಗೂ ಅನ್ವಯ: ಪಾಲಿಕೆ ವತಿಯಿಂದ ಆಯೋಜಿಸುವ ಯಾವುದೇ ಸಭೆ, ಸಮಾರಂಭಗಳು ಅಥವಾ ದಿನ ಬಳಕೆಗೆ ಅಗತ್ಯವಿರುವ ಇಂಥ ಸಾಮಗ್ರಿಗಳನ್ನು ಖರೀದಿಸುವಂತೆ ಅವರು ತಿಳಿಸಿದ್ದಾರೆ.

ADVERTISEMENT

ಕುಡಿಯುವ ನೀರನ್ನು ಶುದ್ಧೀಕರಿಸಿ ವಿತರಿಸುವ ವ್ಯವಸ್ಥೆ (ಆರ್‌.ಒ ಅಥವಾ ಯು.ವಿ ಶುದ್ಧೀಕರಣ ಘಟಕ) ಅಳವಡಿಸಬೇಕು. ಈ ಸಲುವಾಗಿ ಅಗತ್ಯ ಪ್ರಮಾಣದ ಸ್ಟೀಲ್‌ ಲೋಟಗಳನ್ನು ಖರೀದಿಸಬೇಕು. ಇವುಗಳನ್ನು ಖರೀದಿಗಾಗಿ ಪಾಲಿಕೆಯ ಎಲ್ಲ ವಿಭಾಗಗಳ ಮುಖ್ಯಸ್ಥರ ಕಚೇರಿ ₹ 18 ಸಾವಿರ ಹಾಗೂ ಅಧೀನ ಕಚೇರಿಗಳು ₹ 15 ಸಾವಿರದವರೆಗೆ ಬಳಕೆ ಮಾಡಬಹುದು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.