ADVERTISEMENT

ಪ್ರಧಾನಿ ಸಂಚಾರ: ನಗರದ ಪರ್ಯಾಯ ರಸ್ತೆಗಳಲ್ಲಿ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 20:53 IST
Last Updated 20 ಜೂನ್ 2022, 20:53 IST
   

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂಚಾರಕ್ಕಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಿದ್ದರಿಂದ ಪರ್ಯಾಯ ರಸ್ತೆಗಳಲ್ಲಿ ದಟ್ಟಣೆ ಕಂಡು ಬಂತು.

ಯಲಹಂಕ ವಾಯುನೆಲೆಗೆ ಬಂದಿಳಿದ ಮೋದಿ, ರಸ್ತೆ ಮಾರ್ಗವಾಗಿ ಸಂಚರಿಸಿ ಐಐಎಸ್ಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮೋದಿ ಸಂಚಾರಕ್ಕಾಗಿ, ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು.

ವಿಮಾನ ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದ ಸಾರ್ವಜನಿಕರ ವಾಹನ ಗಳು, ಹೆಬ್ಬಾಳ ಮೇಲ್ಸೇತುವೆ ಬದಲು ಹೊರವರ್ತುಲ ರಸ್ತೆ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸಿ ದವು. ಇದರಿಂದಾಗಿ ಕೋಲಾರ ರಸ್ತೆ, ನ್ಯೂ ಬಿಇಎಲ್‌ ವೃತ್ತ ರಸ್ತೆ, ಜಾಲಹಳ್ಳಿ ರಸ್ತೆಯಲ್ಲಿ ವಾಹನಗಳು ನಿಧಾನಗತಿ
ಯಲ್ಲಿ ಸಂಚರಿಸಿದವು.

ADVERTISEMENT

ಹೆಬ್ಬಾಳ ಮೇಲ್ಸೇತುವೆ, ಮೇಖ್ರಿ ವೃತ್ತ ಹಾಗೂ ಕಾವೇರಿ ವೃತ್ತ ರಸ್ತೆಯನ್ನು ಸಿಗ್ನಲ್ ಮುಕ್ತಗೊಳಿಸಿ ಪ್ರಧಾನಿ ಕಾರು ಸಂಚಾರಕ್ಕೆ ಮೀಸಲಿ ಡಲಾಗಿತ್ತು. ಇದರಿಂದಾಗಿ ಆರ್‌.ಟಿ.ನಗರ, ವಸಂತನಗರ, ಹೆಬ್ಬಾಳ, ಸದಾಶಿವನಗರ, ಮಲ್ಲೇಶ್ವರ ಹಾಗೂ ಸುತ್ತಮುತ್ತ ಪ್ರದೇಶಗಳ ಒಳ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಿದ್ದರಿಂದ ದಟ್ಟಣೆ ಉಂಟಾಯಿತು.

ಬಂದ್: ಕೆಂಗೇರಿಯಿಂದ ಕೊಮ್ಮಘಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಅಂಗಡಿ, ಹೋಟೆಲ್ ಹಾಗೂ ಇತರೆ ಮಳಿಗೆ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಿಸಲಾಗಿತ್ತು. ಪ್ರಧಾನಿ ಮೋದಿ ಅವರು ಹೆಲಿ ಕಾಪ್ಟರ್‌ ಮೂಲಕ ಕೊಮ್ಮಘಟ್ಟಕ್ಕೆ ಬಂದಿದ್ದರು. ಆದರೆ, ಅವರ ಭದ್ರತೆ ಉದ್ದೇಶದಿಂದ ಕೊಮ್ಮಘಟ್ಟ–ಕೆಂಗೇರಿ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿತ್ತು. ರಸ್ತೆಯ ಎರಡೂ ಬದಿಯಲ್ಲಿ ಪೊಲೀಸರು ಕಾವಲು ಕಂಡುಬಂತು.

ಮೈಸೂರು ರಸ್ತೆಯಲ್ಲೂ ಕೆಲ ನಿಮಿಷ ವಾಹನಗಳ ಸಂಚಾರ ನಿರ್ಬಂಧಿಸಲಾ
ಗಿತ್ತು. ಇದರಿಂದಾಗಿ ನಗರದ ಹೊರವಲಯದಲ್ಲಿ ದಟ್ಟಣೆ ಕಂಡುಬಂತು.

ರಸ್ತೆಗೆ ಇಳಿಯದ ವಿದ್ಯಾರ್ಥಿಗಳು: ಪ್ರಧಾನಿ ಅವರ ನಿಗದಿತ ಸಂಚಾರಕ್ಕೆ ಹಾಗೂ ಅವರ ತುರ್ತು ಸಂಚಾರಕ್ಕೆ ನಗರದ ಹಲವು ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಜೊತೆಗೆ, ಅವರು ಸಂಚರಿಸುವ ರಸ್ತೆಯುದ್ದಕ್ಕೂ ಇರುವ ಶಾಲಾ–ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸ ಲಾಗಿತ್ತು. ಹೀಗಾಗಿ, ಬಹುತೇಕ ಕಡೆ ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ರಸ್ತೆಗೆ ಇಳಿಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.