ADVERTISEMENT

ನೋಡಿ: ಬೆಂಗಳೂರಲ್ಲಿ ಉಚಿತ ತರಕಾರಿ ಹಂಚಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:20 IST
Last Updated 30 ಏಪ್ರಿಲ್ 2021, 15:20 IST

ಬೆಂಗಳೂರು: ಜನರು ಗುಂಪು ಸೇರುವುದು, ಕಾರ್ಯಕ್ರಮ ನಡೆಸುವುದು ಮತ್ತು ಯಾವುದೇ ಸಾರ್ವಜನಿಕ ಸಭೆ ನಿಷೇಧಿಸಲಾಗಿದೆ. ಆದರೆ ಕೋವಿಡ್ ನಿಯಮಗಳನ್ನು ಮೀರಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ಉಚಿತ ತರಕಾರಿ ಹಂಚಲಾಗಿದೆ. ಉಚಿತವಾಗಿ ತರಕಾರಿ ಹಂಚುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನರು ಗುಂಪುಗೂಡಿದ್ದಾರೆ. ಅಲ್ಲದೆ ಸರತಿ ಸಾಲಿನಲ್ಲಿ ನಿಂತರೂ ಸಾಮಾಜಿಕ ಅಂತರ, ಮಾಸ್ಕ್ ಮರೆತಿದ್ದಾರೆ. ಜತೆಗೆ ಉಚಿತ ತರಕಾರಿ ಪಡೆಯಲು ಮುಗಿಬಿದ್ದಿದ್ದಾರೆ. ಸಾಮಾಜಿಕ ಅಂತರ ಪಾಲಿಸುವಂತೆ ಪೊಲೀಸರು ಕೇಳಿಕೊಂಡರೂ ಜನರು ಅದನ್ನು ನಿರ್ಲಕ್ಷಿಸಿದ್ದಾರೆ. ಬಳಿಕ ಪೊಲೀಸರು ಹೊಸೂರು ರಸ್ತೆಯ ವಿಲ್ಸನ್ ಗಾರ್ಡನ್ ಪ್ರದೇಶದಲ್ಲಿ ಜನರಿಗೆ ಉಚಿತ ತರಕಾರಿ ಹಂಚುತ್ತಿದ್ದವರನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.