ADVERTISEMENT

ಗಲಭೆ; ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗೆ ಬೈಕ್‌

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 21:39 IST
Last Updated 12 ನವೆಂಬರ್ 2020, 21:39 IST

ಬೆಂಗಳೂರು: ಡಿ.ಜೆ. ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಸಂತ್ರಸ್ತರಾದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಗುರುವಾರ ಬೈಕ್‌ಗಳನ್ನು ವಿತರಿಸಲಾಯಿತು.

ಗಲಭೆ ಸಂದರ್ಭದಲ್ಲಿ ಠಾಣೆ ಪಾರ್ಕಿಂಗ್ ಜಾಗದಲ್ಲಿದ್ದ ಹಾಗೂ ಠಾಣೆ ಎದುರಿನ ರಸ್ತೆಯಲ್ಲಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟಿದ್ದರು. ಆ ಪೈಕಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಸೇರಿದ್ದ 25 ಬೈಕ್‌ಗಳಿದ್ದವು. ಬೈಕ್ ಸುಟ್ಟಿದ್ದರಿಂದ ಅವರೆಲ್ಲರ ಓಡಾಟಕ್ಕೆ ತೊಂದರೆ ಆಗಿತ್ತು.

ಸಿಬ್ಬಂದಿ ಓಡಾಡಲು ವಾಹನ ಇಲ್ಲದಿರುವುದನ್ನು ತಿಳಿದ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಗೃಹ ಸಚಿವರ ಜೊತೆ ಮಾತುಕತೆ ನಡೆಸಿ ಟಿವಿಎಸ್ ಕಂಪನಿಯ ಆರ್‌ಟಿಆರ್ ಅಪಾಚೆ ಬೈಕ್‌ಗಳನ್ನು ಸಂತ್ರಸ್ತರಿಗೆ ಕೊಡಿಸಿದ್ದಾರೆ.

ADVERTISEMENT

ಅಶೋಕನಗರದ ಐಪಿಎಸ್ ಅಧಿಕಾರಿಗಳ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಾವು ಸದಾ ನಿಮ್ಮ ಜೊತೆ’ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಬೈಕ್‌ಗಳನ್ನು ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.