ADVERTISEMENT

ಭೂ ಮಾಫಿಯಾದಲ್ಲಿ ಪೊಲೀಸರು ಕ್ರಿಮಿನಲ್‌ ಕ್ರಮದ ಎಚ್ಚರಿಕೆ

ಕ್ರಿಮಿನಲ್ ಕ್ರಮದ ಎಚ್ಚರಿಕೆ ನೀಡಿದ ಕಮಿಷನರ್ ಭಾಸ್ಕರ್ ರಾವ್

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 22:22 IST
Last Updated 12 ಮಾರ್ಚ್ 2020, 22:22 IST
ಭಾಸ್ಕರ್ ರಾವ್
ಭಾಸ್ಕರ್ ರಾವ್   

ಬೆಂಗಳೂರು: ಅಮಾಯಕರನ್ನು ಹೆದರಿಸಿ ವಿವಾದಿತ ಆಸ್ತಿಯನ್ನು ಕಬಳಿಸುವ ಹಾಗೂ ವ್ಯಾಜ್ಯಗಳಲ್ಲಿ ಸಂಧಾನ ಮಾಡುವ ಭೂ ಮಾಫಿಯಾದವರ ಡೀಲ್‌ನಲ್ಲಿ ಕೆಲ ಪೊಲೀಸರೂ ಭಾಗಿಯಾಗುತ್ತಿದ್ದು, ಅಂಥವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಭೂಗತ ಪಾತಕಿ ರವಿ ಪೂಜಾರಿ ಜೊತೆ ಎಸಿಪಿಯೊಬ್ಬರು ಸಂಪರ್ಕವಿಟ್ಟುಕೊಂಡಿದ್ದ ಸಂಗತಿ ಹೊರಬಿದ್ದ ಬೆನ್ನಲ್ಲೇ, ಭೂ ಮಾಫಿಯಾ ಹಾಗೂ ಅಪರಾಧ ಕೃತ್ಯಗಳಲ್ಲಿ ತೊಡಗಿರುವರ ಜೊತೆ ಶಾಮೀಲಾಗಿರುವ ಪೊಲೀಸರ ಮೇಲೆ ಕಮಿಷನರ್ ಕಣ್ಣಿಟ್ಟಿದ್ದಾರೆ.

‘ತಮ್ಮದೇ ಗ್ಯಾಂಗ್ ಕಟ್ಟಿಕೊಂಡು ಜನರನ್ನು ಹೆದರಿಸಿ ವಿವಾದಿತ ಜಾಗವನ್ನು ಕಬಳಿಸುವ ದೊರೆಗಳು ನಗರದಲ್ಲಿದ್ದಾರೆ. ಅವರಿಗೆ ಶಿಷ್ಯಂದಿರು ಇದ್ದು, ಅವರೆಲ್ಲರನ್ನೂ ನಾನು ಗಮನಿಸುತ್ತಿದ್ದೇನೆ. ಅವರ ಜೊತೆಗಿರುವ ಪೊಲೀಸರ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಪುರಾವೆ ಸಿಕ್ಕರೆ ಪೊಲೀಸರ ವಿರುದ್ಧವೂ ಕ್ರಿಮಿನಲ್ ಕ್ರಮ ಜರುಗಿಸುತ್ತೇನೆ’ ಎಂದು ಭಾಸ್ಕರ್ ರಾವ್ ಹೇಳಿದರು.

ADVERTISEMENT

‘ಪ್ರತಿಯೊಬ್ಬ ಪೊಲೀಸರಿಗೂ ಇಲಾಖೆ ಒಳ್ಳೆಯ ಸ್ಥಾನಮಾನ ನೀಡಿದೆ. ಇಷ್ಟಾದರೂ ಕೆಲ ಪೊಲೀಸರು ಅಕ್ರಮ ಹಣ ಸಂಪಾದನೆಗಾಗಿ ಮಾಫಿಯಾ ಜೊತೆ ಕೈ ಜೋಡಿಸುತ್ತಿದ್ದಾರೆ. ಇದು ನಾಚಿಕೆಗೇಡು’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.