ADVERTISEMENT

ಹೆಲ್ಮೆಟ್‌ನಿಂದ ಸೋಂಕಿನ ಭಯ; ವಿನಾಯಿತಿ ಕೋರಿದವನಿಗೆ ಕಮಿಷನರ್ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 8:42 IST
Last Updated 16 ಜೂನ್ 2020, 8:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಬೆಂಗಳೂರು: ಹೆಲ್ಮೆಟ್‌ ಧರಿಸುವುದರಿಂದ ಕೊರೊನಾ ಸೋಂಕು ಹರಡುವ ಭಯವಿದ್ದು, ಸೋಂಕಿತರ ಸಂಖ್ಯೆ ಕಡಿಮೆ ಆಗುವವರೆಗೂ ಹೆಲ್ಮೆಟ್ ಧರಿಸುವುದರಿಂದ ವಿನಾಯಿತಿ ನೀಡುವಂತೆ ಸಂಜಯ್ ಎಂಬುವರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಟ್ವೀಟ್ ಮಾಡಿದ್ದಾರೆ.

‘ಜನರು ತಮ್ಮ ಹೆಲ್ಮೆಟ್‌ಗಳನ್ನು ತೆಗೆದು ಸಾರ್ವಜನಿಕ ಸ್ಥಳ, ಟೇಬಲ್, ಕುರ್ಚಿ, ಇತರ ವಸ್ತುಗಳ ಮೇಲೆ ಇಡುತ್ತಿದ್ದಾರೆ‍. ಸಾಮಾನ್ಯವಾಗಿ ಹೆಲ್ಮೆಟ್‌ಗಳನ್ನೂ ಯಾರೂ ಸ್ವಚ್ಛಗೊಳಿಸುವುದಿಲ್ಲ. ಸೋಂಕಿತ ವ್ಯಕ್ತಿ ಕೂಡ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಆ ಹೆಲ್ಮೆಟ್ ಈ ರೀತಿ ಎಲ್ಲೆಂದರಲ್ಲಿ ಇಟ್ಟರೆ ಸೋಂಕು ಹರಡುವಿಕೆ ಸಾಧ್ಯತೆ ಹೆಚ್ಚು. ಹೀಗಾಗಿ, ದ್ವಿಚಕ್ರ ವಾಹನ ಸವಾರರಿಗೆ ಸದ್ಯಕ್ಕೆ ಹೆಲ್ಮೆಟ್‌ನಿಂದ ವಿನಾಯಿತಿ ನೀಡಿ’ ಎಂದು ಟ್ವೀಟ್‌ನಲ್ಲಿ ಸಂಜಯ್ ಕೋರಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಭಾಸ್ಕರ್ ರಾವ್, ‘ಹೆಲ್ಮೆಟ್ ಕಡ್ಡಾಯ ನಿಯಮ ಪ್ರಾಣಾಪಾಯ ತಪ್ಪಿಸುವ ಕ್ರಮವೇ ಹೊರತು ಸಾರ್ವಜನಿಕರ ಮೇಲೆ ಹೇರಿರುವ ಶಿಕ್ಷೆಯಲ್ಲ. ನೀವು ಹೆಲ್ಮೆಟ್ ಧರಿಸದಿದ್ದರೆ ಅದು ನಿಮ್ಮ ಕುಟುಂಬಕ್ಕೆ ಮಾಡುವ ಅನ್ಯಾಯವಾಗುತ್ತದೆ’ ಎಂದಿದ್ದಾರೆ.

ADVERTISEMENT

‘ನಿತ್ಯವೂ ಅಪಘಾತ ಸಂಭವಿಸುತ್ತಿರುವುದನ್ನು ನಾವು–ನೀವು ನೋಡುತ್ತಿರುತ್ತೇವೆ. ಹೆಲ್ಮೆಟ್ ಧರಿಸುವ ಮೂಲಕ ನಿಮ್ಮನ್ನು ಮತ್ತು ಕುಟುಂಬವನ್ನು ಸುರಕ್ಷಿತವಾಗಿರಿಸಿಕೊಳ್ಳಿ’ ಎಂದೂ ಅವರು ಸಲಹೆ ನೀಡಿದ್ದಾರೆ.

ಈ ಪ್ರತಿಕ್ರಿಯೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.