ADVERTISEMENT

ಲಾಠಿ ಬಿಟ್ಟಿಲ್ಲ, ಸಂದರ್ಭ ಬಂದಾಗ ಎಲ್ಲ ಅಸ್ತ್ರ ಬಳಕೆ: ಕಮಿಷನರ್ ಭಾಸ್ಕರರಾವ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 7:52 IST
Last Updated 20 ಏಪ್ರಿಲ್ 2020, 7:52 IST
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್    

ಬೆಂಗಳೂರು: 'ಪೊಲೀಸರು ಲಾಠಿ ಬಿಟ್ಟು ಕೆಲಸ ಮಾಡುತ್ತಿಲ್ಲ. ಸರ್ಕಾರ ಕೊಟ್ಟಿರುವ ಅಸ್ತ್ರಗಳನ್ನು ಸಂದರ್ಭಕ್ಕೆ ಅನುಸಾರವಾಗಿ ಬಳಸುತ್ತೇವೆ' ಎಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

ಪಾದರಾಯನಪುರದಲ್ಲಿ ನಡೆದ ಘಟನೆ ಬಗ್ಗೆ ಜಗಜೀವನರಾಮ ನಗರ ಠಾಣೆಯಲ್ಲಿ ಮಾತನಾಡಿದ ಅವರು' ಪ್ರಕರಣದಲ್ಲಿ ಯಾರೇ ಇದ್ದರೂ ಬಿಡುವುದಿಲ್ಲ' ಎಂದರು‌. +'ಅಂದು ಪರಿಸ್ಥಿತಿ ಸೂಕ್ಷ್ಮವಾಗಿದ್ದರಿಂದ ಲಾಠಿ ಹೆಚ್ಚು ಬಳಸದಂತೆ ಹೇಳಿದ್ದೆ. ಅದು ಎಲ್ಲದ್ದಕ್ಕೂ ಅನ್ವಯ ಆಗೊಲ್ಲ. ಯಾವಾಗ ಬಳಸಬೇಕು ಅವಾಗ ಬಳಸುವ ತರಬೇತಿಯೂ ನಮಗಿದೆ' ಎಂದರು.

'ಇಂಥ ಘಟನೆ ಬೇರೆ ಕಡೆ ಆಗದಂತೆ ಈಗಾಗಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದೆ' ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.