ADVERTISEMENT

ಪೊರಕೆ, ಗುದ್ದಲಿ ಹಿಡಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 20:31 IST
Last Updated 6 ಜನವರಿ 2019, 20:31 IST
ಪೊರಕೆ ಹಿಡಿದು ಕಸಗೂಡಿಸಿದ ಪೊಲೀಸ್
ಪೊರಕೆ ಹಿಡಿದು ಕಸಗೂಡಿಸಿದ ಪೊಲೀಸ್   

ಬೆಂಗಳೂರು: ನಿತ್ಯ ಸಂಚಾರ ದಟ್ಟಣೆಯ ನಿಯಂತ್ರಣ ಹಾಗೂ ಸಂಚಾರ ನಿಯಮ ಉಲ್ಲಂಘಿಸುವರ ಪತ್ತೆ ಕೆಲಸದಲ್ಲಿ ನಿರತರಾಗುವ ಪೊಲೀಸರು, ಭಾನುವಾರ ಮಾತ್ರ ಪೊರಕೆ ಹಾಗೂ ಗುದ್ದಲಿ ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಹೆಚ್ಚುವರಿ ಪೊಲೀಸ್ ಕಮಿಷನರ್ ಪಿ.ಹರಿಶೇಖರನ್ ಸೂಚನೆಯಂತೆ ಪೊಲೀಸರು, ತಮ್ಮ ಠಾಣೆ ಹಾಗೂ ಠಾಣೆ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿದ್ದ ಸಂಚಾರ ಫಲಕಗಳನ್ನು ಸ್ವಚ್ಛಗೊಳಿಸಿದರು. ರಸ್ತೆಗಳಲ್ಲಿದ್ದ ಗುಂಡಿಗಳನ್ನು ಮುಚ್ಚಿದರು.

ನಗರದಲ್ಲಿ 44 ಸಂಚಾರ ಠಾಣೆಗಳಿದ್ದು, ಅದರ ಒಳ ಭಾಗ ಹಾಗೂ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಇನ್‌ಸ್ಪೆಕ್ಟರ್‌ನಿಂದ ಹಿಡಿದು ಕಾನ್‌ಸ್ಟೆಬಲ್‌ವರೆಗೆ ಪ್ರತಿಯೊಬ್ಬರೂ ಸ್ವಚ್ಛತಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.

ADVERTISEMENT

ಅಪಘಾತ ಹಾಗೂ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ವಾಹನಗಳನ್ನು ಠಾಣೆ ಆವರಣದಲ್ಲೇ ನಿಲ್ಲಿಸಲಾಗಿದೆ. ವಾಹನ ಗಳಿರುವ ಭಾಗವೆಲ್ಲ ಗಲೀಜಾಗಿತ್ತು. ಅಂಥ ಜಾಗವನ್ನು ಸಹ ಶುಚಿಗೊಳಿಸಲಾಯಿತು. ಸ್ಥಳೀಯರು ಸಹ ಪೊಲೀಸರ ಕೆಲಸಕ್ಕೆ ಕೈ ಜೋಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.