
ಬೆಂಗಳೂರು: ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಲು ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆಯು ಇದೇ 30ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿ ನೇರ ಸಂದರ್ಶನ ಏರ್ಪಡಿಸಿದೆ.
ಸ್ವವಿವರ, ಶೈಕ್ಷಣಿಕ ಪ್ರಮಾಣ ಪತ್ರದ ನಕಲು ಪ್ರತಿಗಳೊಂದಿಗೆ ಮಹಾಲಕ್ಷ್ಮಿ ಪುರ ಪೊಲೀಸ್ ಠಾಣೆ ಬಳಿಯ ಬೆಂಗಳೂರು ಪಶ್ಚಿಮ ಅಂಚೆ ವಿಭಾಗ, ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ನಿರುದ್ಯೋಗಿಗಳು, ಸ್ವಯಂ ಉದ್ಯೋಗಿಗಳು, ವಿಮಾ ಕಂಪನಿಗಳ ಮಾಜಿ ಏಜೆಂಟರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ. ಪಂ.ಗಳ ಮಾಜಿ ಸದಸ್ಯರು, ಮಹಿಳಾ ಮಂಡಲ ಕಾರ್ಯಕರ್ತೆಯರು ಭಾಗವಹಿಸಬಹುದು. ಆಯ್ಕೆಯಾಗು ವವರು ರಾಷ್ಟ್ರೀಯ ಉಳಿತಾಯ ಪತ್ರದ ರೂಪದಲ್ಲಿ ₹5,000 ಭದ್ರತಾ ಠೇವಣಿ ಇಡಬೇಕು. ವ್ಯವಹಾರಕ್ಕೆ ತಕ್ಕಂತೆ ಕಮಿಷನ್ ನೀಡಲಾಗುವುದು. ವಿವರಗಳಿಗೆ 7975127704/080–23493283 ಸಂಪರ್ಕಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.