
ಪ್ರಜಾವಾಣಿ ವಾರ್ತೆ
ಬೆಂಗಳೂರು: ಎಚ್.ಬಿ.ಆರ್. 66/11 ಕೆ.ವಿ. ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಕಾರಣ ಫೆ.4ರ (ಮಂಗಳವಾರ) ಬೆಳಿಗ್ಗೆ 6ರಿಂದ ಫೆ. 9 (ಸೋಮವಾರ) ರಾತ್ರಿ 10 ಗಂಟೆವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಎಲ್ಆರ್‌ಪಿ ಕಚೇರಿ, ಜಯಕುಮಾರ್ ಆರ್‌ಎಂಯು, ದಿವ್ಯ ಶಾಂತಿ, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಟೈಟಾನ್ ಗ್ಯಾರೇಜ್, ಗಾಂಧಿನಗರ, ಭೈರವಿ ಅಪಾರ್ಟ್‌ಮೆಂಟ್ಸ್, ಹೆಗ್ಗಡೆ ನಗರ, ಚಂದ್ರಿಕಾ ಸೋಪ್ ಫ್ಯಾಕ್ಟರಿ, ಬಿಎಂಟಿಸಿ ಡಿಪೊ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.