ADVERTISEMENT

ವಿದ್ಯುತ್‌ ವ್ಯತ್ಯಯ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 19:09 IST
Last Updated 18 ಜನವರಿ 2021, 19:09 IST

ಬೆಂಗಳೂರು: ರಾಜರಾಜೇಶ್ವರಿನಗರ ಉಪವಿಭಾಗ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಭಾಗದ ಪ್ರದೇಶಗಳಲ್ಲಿ ಇದೇ 19ರಿಂದ 29ರವರೆಗೆ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಗಿರಿಧಾಮ ಬಡಾವಣೆ, ಗಟ್ಟಿಗೆರೆ, ಐಡಿಯಲ್‌ ಹೋಮ್ಸ್ ಬಡಾವಣೆ, ಹರಿದಾಸನಗರ, ಶುಭೋದಯ ಅಪಾರ್ಟ್‌ಮೆಂಟ್, ಬಿಇಎಂಎಲ್ ಮೂರನೇ ಹಂತ, ಬಿಇಟಿ ಶಾಲೆ, ಪ್ರಕೃತಿ ಡ್ರೈವಿಂಗ್‌ ಶಾಲೆ, ನ್ಯಾಷನಲ್‌ ಹಿಲ್‌ ವ್ಯೂ ಶಾಲೆ, ಲಕ್ಷ್ಮಿ ಸೂಪರ್‌ಮಾರ್ಕೆಟ್, ಕೆನರಾ ಬ್ಯಾಂಕ್ ವೃತ್ತ, ಎಸ್‌ಎಲ್‌ವಿ ಕ್ಯಾಂಟೀನ್, ಬಿಇಎಂಎಲ್ ಗೇಟ್, ಶನಿಮಹಾತ್ಮ ಗುಡಿ, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್‌ ಬ್ಯಾಂಕ್, ವಿವೇಕಾನಂದ ಪಾರ್ಕ್, ಬಿಇಎಂಎಲ್ ಮೂರನೇ ಹಂತ, ರಾಘವೇಂದ್ರಸ್ವಾಮಿ ದೇವಸ್ಥಾನ ಸುತ್ತ–ಮುತ್ತಲಿನ ಪ್ರದೇಶ.

ಜಯದೇವ, ಸಾರಕ್ಕಿ ಉಪವಿಭಾಗ:

ADVERTISEMENT

ಈ ಉಪವಿಭಾಗ ವ್ಯಾಪ್ತಿಯ ಜೆ.ಪಿ. ನಗರ, ಮಾರೇನಹಳ್ಳಿ, ಆರ್.ಕೆ. ಕಾಲೊನಿ, ಮಂಜುನಾಥ ಕಾಲೊನಿ, ಧನ್ವಂತರಿ ಉದ್ಯಾನ, ಐಎಎಸ್‌ ಕಾಲೊನಿ, ಮದೀನಾ ನಗರ, ಬಿಟಿಎಂ ಬಡಾವಣೆ, ಡಾಲರ್ಸ್‌ ಬಡಾವಣೆ, ದಾಲ್ಮಿಯಾ ವೃತ್ತ ವರ್ತುಲ ರಸ್ತೆ, ಮೈಕೊ ಬಡಾವಣೆ, ಶ್ರಾವಂತಿ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.19ರಿಂದ 22ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 4ರವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.