ADVERTISEMENT

ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 18:42 IST
Last Updated 11 ಫೆಬ್ರುವರಿ 2021, 18:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಇದೇ 12,13 ಮತ್ತು 17 ಹಾಗೂ 19ರಂದು ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಅಂಬೇಡ್ಕರ್‌ ನಗರ, ಉಪಕಾರ್ ಬಡಾವಣೆ, ಪೈ ಬಡಾವಣೆ, ಬೆಳತೂರು, ಸಿದ್ಧಾರ್ಥ್‌ ಬಡಾವಣೆ, ಪಟಾಲಮ್ಮ ಬಡಾವಣೆ, ಶಂಕರಪುರ, ಕಾಡುಗೋಡಿ, ಚನ್ನಸಂದ್ರ, ಸಪ್ತಗಿರಿ ಬಡಾವಣೆ, ಗಾಂಧಿಪುರ, ಹಗದೂರು, ಇಸಿಸಿ ರಸ್ತೆ, ಪ್ರಶಾಂತ ಬಡಾವಣೆ, ಇಮ್ಮದಿಹಳ್ಳಿ ಮುಖ್ಯ ರಸ್ತೆ, ವಿ.ಎಸ್.ಆರ್. ಬಡಾವಣೆ, ಒ.ಪಿ.ಎಚ್. ರಸ್ತೆ, 3ಜಿ ಹೋಮ್ಸ್, ಕೊಂಬೆನ ಅಗ್ರಹಾರ, ಬಿಪಿಎಲ್ ಕ್ರಾಸ್, ಜಿ.ಆರ್. ಟೆಕ್ ಪಾರ್ಕ್, ಎಂ.ಜೆ.ಆರ್. ಪೀರ್ ಅಪಾರ್ಟ್‍ಮೆಂಟ್, ವಿಜಯನಗರ, ಮೈತ್ರಿ ಬಡಾವಣೆ, ವೈಟ್‍ಫೀಲ್ಡ್ ಮುಖ್ಯ ರಸ್ತೆ,
ಬಾಲಾಜಿ ಅಪಾರ್ಟ್‍ಮೆಂಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ 12ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಸ್.ಜೆ.ಆರ್. ಟೆಕ್ ಪಾರ್ಕ್, ಸಂತೋಷ್‌ ಟವರ್, ಶೈಲೇಂದ್ರ ಟೆಕ್ ಪಾರ್ಕ್ ಸುತ್ತ–ಮುತ್ತ 13ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ, ಜಯನಗರದ ಉಪವಿಭಾಗದ ಜೆ.ಪಿ. ನಗರ, ದಾಲ್ಮಿಯಾ ಸಿಗ್ನಲ್, ಡಾಲರ್ಸ್‌ ಕಾಲೊನಿ, 100 ಅಡಿ ವರ್ತುಲ ರಸ್ತೆಯ ಸುತ್ತ–ಮುತ್ತ ವಿದ್ಯುತ್ 17 ಮತ್ತು 19ರಂದು ಬೆಳಿಗ್ಗೆ 10.30ರಿಂದ 6.30ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.