ADVERTISEMENT

ಕೊರೊನಾ: ಗರ್ಭಿಣಿ, ಬಾಣಂತಿಯರಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST
   

ಕೋವಿಡ್‌-19 ವೈರಸ್ ತೀವ್ರ ಗತಿಯಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಮತ್ತು ಹಾಲುಣಿಸುವವರು ಹೇಗೆ ಎಚ್ಚರವಹಿಸಬೇಕು ಎಂಬುದರ ಬಗ್ಗೆ ಖ್ಯಾತ ವೈದ್ಯೆಡಾ. ಹೇಮಾ ದಿವಾಕರ್ ಒಂದಿಷ್ಟು ಸಲಹೆ ನೀಡಿದ್ದಾರೆ.

* ಗರ್ಭಿಣಿಯರು ಕಟ್ಟುನಿಟ್ಟಾಗಿ ಜನರಿಂದ ದೂರ ಉಳಿಯಬೇಕು. ಆಸ್ಪತ್ರೆಗಳಿಗೆ ಅನಗತ್ಯವಾಗಿ ಭೇಟಿ ನೀಡಬಾರದು.

* ಆಗಾಗ್ಗೆ ಕೈಗಳನ್ನು ತೊಳೆಯುವುದು ಬಹಳ ಮುಖ್ಯ. ಗರ್ಭಿಣಿಯರು ಗರ್ಭಧಾರಣೆಗೆ ಸಂಬಂಧಿಸಿದ ರಿಸ್ಕ್‌ ಗಳಿಲ್ಲದೇ ಇದ್ದಲ್ಲಿ ಆದಷ್ಟೂ ಮನೆಯಲ್ಲಿರಬೇಕು. ನಿಯಮಿತ ಕಾರ್ಯಕ್ರಮಗಳನ್ನು ಮುಂದೂಡುವುದು ಅಗತ್ಯ.

ADVERTISEMENT

* ನಿಯಮಿತವಾಗಿ ವೈದ್ಯರ ಭೇಟಿಯಾಗಬೇಕೆನಿಸಿದರೆ ಫೋನ್ ಅಥವಾ ವಿಡಿಯೊಕಾಲ್ ಅಥವಾ ವಾಟ್ಸ್ ಆ್ಯಪ್ ಚಾಟ್ ಮೂಲಕ ಚರ್ಚೆ ಮಾಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

* ಸಮಯ ಕಳೆದಂತೆ ಅನಿವಾರ್ಯವಾಗಿ ಹೆಚ್ಚು ಗರ್ಭಿಣಿ ಯರು ವೈರಸ್ ಸಂಪರ್ಕಕ್ಕೆ ಬರಬಹುದು. ಆಗ ನಮಗೆಲ್ಲ ರಿಗೂ ವೈರಸ್ ಹೇಗೆ ವರ್ತಿಸುತ್ತದೆ ನಂತರ ತಿಳಿಯುತ್ತದೆ. ಸದ್ಯಕ್ಕೆ ಕೈಗಳನ್ನು ತೊಳೆಯುವುದು, ಜನರಿಂದ ದೂರ ಉಳಿಯುವುದು, ಮನೆಯಲ್ಲಿ ಇರುವುದು, ಜನರು ಭೇಟಿ ನೀಡದಂತೆ ನೋಡಿಕೊಳ್ಳುವುದು ಪ್ರಮುಖ ಮುನ್ನೆಚ್ಚರಿಕೆಯ ಕ್ರಮಗಳಾಗಿವೆ.

* ನಮಗೆ ವೈರಸ್ ಕುರಿತು ತಿಳಿದಿರುವಂತೆ, ಸದ್ಯಕ್ಕೆ ಕೊರೊನಾ ವೈರಸ್ ಸೋಂಕಿತ ತಾಯಂದಿರು ತಮಗೆ ಜ್ವರ ಅಥವಾ ಕೆಮ್ಮು ಕಾಣಿಸಿದಲ್ಲಿ ತಾತ್ಕಾಲಿಕವಾಗಿ ಮಗುವಿನಿಂದ ದೂರ ಉಳಿಯಬೇಕು. ಇದು ತಜ್ಞರ ಸಲಹೆ. ಸೋಂಕಿತ ತಾಯಂದಿರು ಗುಣವಾಗುವವರೆಗೆ ಎದೆಹಾಲನ್ನು ಹಿಂಡಿ ಹೊರ ಚೆಲ್ಲುವುದೇ ಉತ್ತಮ ಉಪಾಯ.

* ಸದ್ಯಕ್ಕೆ ಸಿ.ಡಿ.ಸಿ. ಯು.ಎಸ್.ಎ(ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ವೈರಸ್ ಸೋಂಕಿತ ಅಥವಾ ಅನುಮಾನವುಳ್ಳ ಮಹಿಳೆಯರು ಸ್ತನ್ಯಪಾನ ಮಾಡಿಸಬಾರದು ಎಂದು ಹೇಳಿಲ್ಲ. ಅದರ ಬದಲಿಗೆ ಅವರಿಗೆ ಮಗುವನ್ನು ಸ್ಪರ್ಶಿಸುವ ಮೊದಲು ಕೈಗಳನ್ನು ತೊಳೆಯುವುದು ಮತ್ತು ಸ್ತನ್ಯಪಾನದ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದು ಸೂಕ್ತ ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.