ಕೆ.ಆರ್.ಪುರ: ದಸರಾ ಮಹೋತ್ಸವದ ಅಂಗವಾಗಿ ಚಿಕ್ಕದೇವಸಂದ್ರ ಗ್ರಾಮದಲ್ಲಿ ದೊಡ್ಡಮ್ಮ ದೇವಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರದ ಹೂವಿನ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಶ್ರೀದೊಡ್ಡಮ್ಮ ದೇವಿ ಅಭಿವೃದ್ಧಿ ಸಮಿತಿ ವತಿಯಿಂದ ಈ ವರ್ಷ ವಿಭಿನ್ನವಾಗಿ ದಸರಾ ಹಬ್ಬವನ್ನು ಆಚರಿಸಲಾಯಿತು.
ತೆರೆದ ವಾಹನದಲ್ಲಿ ಬುದ್ದ, ಬಸವ, ಅಂಬೇಡ್ಕರ್, ಒನಕೆ ಓಬವ್ವ, ಮಹಿಷಾಸುರ, ಸೊಲ್ಲಾಪುರದ ಶಾಹು ಮಹಾರಾಜ, ಜ್ಯೋತಿಬಾ ಫುಲೆ, ರಮಾಬಾಯಿ ಅಂಬೇಡ್ಕರ್ ಅವರ ವೇಷಭೂಷಣ ಧರಿಸಿದ ಕಲಾವಿದರ ತಂಡದ ಮೆರವಣಿಗೆ ಸಾಗಿದ್ದು ವಿಶೇಷವಾಗಿತ್ತು.
ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್, ನಗರಸಭೆಯ ಮಾಜಿ ಸದಸ್ಯ ಡಿ.ಎ.ನಾಗರಾಜ್, ಮುಖಂಡರಾದ ಗಂಗನಬೀಡು ವೆಂಕಟಸ್ವಾಮಿ, ಪುರುಷೋತ್ತಮದಾಸ್, ನಾಗರಾಜ್ ಮೌರ್ಯ, ತಿಮ್ಮಣ್ಣ, ರವಿಕುಮಾರ್, ರಮೇಶ್, ಕೆಂಪರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.