ಬೆಂಗಳೂರು: ಬಿಬಿಎಂಪಿಯ ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್) ನವೆಂಬರ್ 30ಕ್ಕೆ ಅಂತ್ಯಗೊಂಡಿದ್ದು, ₹4,284 ಕೋಟಿ ಮೊತ್ತದ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಇದು ಪಾಲಿಕೆಯಲ್ಲಿ ಈವರೆಗಿನ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ₹1148.35 ಕೋಟಿ ತೆರಿಗೆ ಸಂಗ್ರಹವಾಗಿದೆ. ಪೂರ್ವ ವಲಯದಲ್ಲಿ ₹710 ಕೋಟಿ ಮತ್ತು ಕೇಂದ್ರ ಕಚೇರಿಯಲ್ಲಿ ₹36 ಕೋಟಿ ತೆರಿಗೆ ಸಂಗ್ರಹವಾಗಿದೆ.
ಫೆಬ್ರುವರಿಯಲ್ಲಿ ಮೊದಲ ಬಾರಿಗೆ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ 31ರಂದು ಕೊನೆಗೊಂಡಿತ್ತು. ‘ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ನಾಗರಿಕರು, ಸಂಘ–ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಅದರಂತೆಯೇ, ಸರ್ಕಾರ ಒಟಿಎಸ್ ಅವಧಿಯನ್ನು ಸೆಪ್ಟೆಂಬರ್‌ವರೆಗೆ ವಿಸ್ತರಿಸಿತ್ತು. ಮತ್ತೆ ಗಡುವನ್ನು ಎರಡನೇ ಬಾರಿಗೆ ನವೆಂಬರ್ 30ರವರೆಗೂ ವಿಸ್ತರಿಸಿತ್ತು.
2025ರ ಮಾರ್ಚ್ ವೇಳೆಗೆ ₹5200 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ಬಿಬಿಎಂಪಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.