ADVERTISEMENT

‘ಬಿ’ ಖಾತಾ ಸ್ವತ್ತು ತೆರಿಗೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 21:45 IST
Last Updated 20 ಫೆಬ್ರುವರಿ 2023, 21:45 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಇನ್ನು ಮುಂದೆ ಬೆಂಗಳೂರು ನಗರದಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾಗಳ ಸ್ವತ್ತು ತೆರಿಗೆ ಒಂದೇ ರೀತಿಯಲ್ಲಿರಲಿದ್ದು, ದುಪ್ಪಟ್ಟು ತೆರಿಗೆ ಪಾವತಿಸುತ್ತಿದ್ದ ಸ್ವತ್ತುಗಳ ಮಾಲೀಕರಿಗೆ ಇದರಿಂದ ಹೊರೆ ತಗ್ಗಲಿದೆ. ಇದೇ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

‘ಬೆಂಗಳೂರು ನಗರದಲ್ಲಿ ಕಂದಾಯ ನಿವೇಶನಗಳಲ್ಲಿ ಲಕ್ಷಾಂತರ ಮಂದಿ ಮನೆಗಳನ್ನು ಕಟ್ಟಿಕೊಂಡಿದ್ದು, ಅದಕ್ಕೆ ದುಪ್ಪಟ್ಟು ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಉದಾಹರಣೆಗೆ ‘ಎ’ ಖಾತಾದಲ್ಲಿರುವವರು ₹100 ತೆರಿಗೆ ಪಾವತಿಸುತ್ತಿದ್ದರೆ, ‘ಬಿ’ ಖಾತಾದಲ್ಲಿ ಮನೆ ಕಟ್ಟಿಕೊಂಡವರು ₹200 ಪಾವತಿಸುತ್ತಿದ್ದರು. ಇನ್ನು ಮುಂದೆ ‘ಎ’ ಮತ್ತು ‘ಬಿ’ ಖಾತಾದಾರರಿಂದ ಒಂದೇ ಪ್ರಕಾರ ತೆರಿಗೆ ವಸೂಲಿ ಮಾಡಲಾಗುವುದು. ಈ ಕ್ರಮದಿಂದ ಲಕ್ಷಾಂತರ ‘ಬಿ’ ಖಾತಾದಾರರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿ’ ಖಾತಾ ಹೊಂದಿರುವ ನಿವಾಸಿಗಳಿಗೆ ತೆರಿಗೆ ಹೊರೆಯೂ ಕಡಿಮೆ ಆಗಲಿದೆ . ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ‘ಬಿ’ ಖಾತಾ ಸ್ವತ್ತುಗಳಿವೆ ಎಂದು ಅಂದಾಜು ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.