ADVERTISEMENT

ಅಂಧರಿಗೆ ಪ್ರಶ್ನೆಪತ್ರಿಕೆ: ಎಚ್ಚರವಹಿಸಬೇಕು

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 19:31 IST
Last Updated 28 ಜನವರಿ 2021, 19:31 IST

ಬೆಂಗಳೂರು: ‘ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯುವ ಅಂಧ ವಿದ್ಯಾರ್ಥಿ ಗಳು ಪ್ರಶ್ನೆಪತ್ರಿಕೆಯಲ್ಲಿ ಚಿತ್ರ ಕೊಟ್ಟು, ಆ ಚಿತ್ರಕ್ಕೆ ಸಂಬಂಧಿಸಿದಂತೆ ನಿಮಗೆ ಅನಿಸಿಕೆ ಬರೆಯಿರಿ ಎಂದು ಕೇಳುವ ಪರಿಪಾಠವನ್ನು ಪರೀಕ್ಷಾ ಮಂಡಳಿ ಇನ್ನಾದರೂ ನಿಲ್ಲಿಸಬೇಕು’ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಒತ್ತಾಯಿಸಿದ್ದಾರೆ.

2019–20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಧ ವಿದ್ಯಾರ್ಥಿಗಳಿಗೆ ನೀಡಿದ್ದ ಪ್ರಶ್ನೆಪತ್ರಿಕೆಯ 5ನೇ ಪುಟದಲ್ಲಿದ್ದ 28ನೇ ಮತ್ತು 33ನೇ ಪ್ರಶ್ನೆಯಲ್ಲಿ ಚಿತ್ರ ಕೊಟ್ಟು, ಆ ಚಿತ್ರದ ಕುರಿತಂತೆ ಬರೆಯಲು ತಿಳಿಸಲಾಗಿದೆ. ಅಂಧ ಮಕ್ಕಳು ಇದನ್ನು ನೋಡಿ ಬರೆ
ಯಲು ಸಾಧ್ಯವೇ? ಪ್ರತಿಬಾರಿ ಇಂಥ ತಪ್ಪು ಗಳನ್ನು ಪರೀಕ್ಷಾ ಮಂಡಳಿ ಮಾಡು ವುದು ಮತ್ತು ಬಳಿಕ ಅದಕ್ಕೆ ಕೃಪಾಂಕ
ನೀಡುವುದನ್ನು ಅಭ್ಯಾಸ ಮಾಡಿ ಕೊಂಡಿದೆ’ ಎಂದೂ ದೂರಿದ್ದಾರೆ.

‘ಈ ರೀತಿಯ ಪ್ರಶ್ನೆ ನೀಡಿ, ಅಂಕ ಗಳನ್ನು ಕರುಣಿಸಿದರೆ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದಂತಾಗುತ್ತದೆಯೇ.
ಇನ್ನಾದರೂ ಈ ಕುರಿತು ಮಂಡಳಿ ಎಚ್ಚರ ವಹಿಸಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.