ADVERTISEMENT

ದ್ವಿತೀಯ ಪಿಯು ಮಾದರಿ ಪ್ರಶ್ನೆ ಪತ್ರಿಕೆ: ವಿವರಣೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:04 IST
Last Updated 31 ಜನವರಿ 2019, 20:04 IST

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳ ಮಾದರಿ ಪ್ರಶ್ನೆ ಪತ್ರಿಕೆ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಆಧರಿಸಿ ರಚಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರಶ್ನೆ ಪತ್ರಿಕೆಗಳ ಮಾದರಿ, ಪ್ರಶ್ನೆಗಳ ವಿಧ ಮತ್ತು ಅಂಕಗಳ ವಿವರ ಈ ರೀತಿ ಇವೆ–

ದ್ವಿತೀಯ ಪಿಯುಸಿ ಲೆಕ್ಕಶಾಸ್ತ್ರ: ಪ್ರಶ್ನೆ ಪತ್ರಿಕೆಯ ‘ಎ’ ವಿಭಾಗದಲ್ಲಿ 1 ಅಂಕದ 10 ಪ್ರಶ್ನೆಗಳಿರುತ್ತವೆ, (ಬಿಟ್ಟ ಸ್ಥಳ ಭರ್ತಿ ಮಾಡಿ–2 ಬಹು ಆಯ್ಕೆ ಪ್ರಶ್ನೆ–2, ಸರಿ/ತಪ್ಪು–1, ವಿಸ್ತರಣೆ–1, ಉದಾಹರಣೆ–1 ಲಘು, ಉತ್ತರ–3 ಪ್ರಶ್ನೆಗಳು). ಇದರಲ್ಲಿ 8 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಬಿ’ ವಿಭಾಗದಲ್ಲಿ 2 ಅಂಕದ 8 ಪ್ರಶ್ನೆಗಳು ಇರುತ್ತವೆ. ಅದರಲ್ಲಿ 5 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಸಿ’ ವಿಭಾಗದಲ್ಲಿ 6 ಅಂಕದ 7 ಪ್ರಶ್ನೆಗಳಿರಲಿದ್ದು, 4 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಇ’ ವಿಭಾಗದಲ್ಲಿ 5 ಅಂಕದ 3 ಪ್ರಶ್ನೆಗಳಿರಲಿದ್ದು, 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ.

ADVERTISEMENT

ವ್ಯವಹಾರ ಅಧ್ಯಯನ: ಪ್ರಶ್ನೆ ಪತ್ರಿಕೆಯ ‘ಎ’ ವಿಭಾಗದಲ್ಲಿ 1 ಅಂಕದ 12 ಪ್ರಶ್ನೆಗಳಿದ್ದು(ಬಹು ಆಯ್ಕೆ ಪ್ರಶ್ನೆ–4, ಲಘು ಉತ್ತರ–8 ಪ್ರಶ್ನೆಗಳು) ಅದರಲ್ಲಿ 10 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಬಿ’ ವಿಭಾಗದಲ್ಲಿ 2 ಅಂಕದ 12 ಪ್ರಶ್ನೆಗಳಿದ್ದು, ಅದರಲ್ಲಿ 10 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಸಿ’ ವಿಭಾಗದಲ್ಲಿ 4 ಅಂಕದ 10 ಪ್ರಶ್ನೆಗಳಿದ್ದು, ಅದರಲ್ಲಿ 4 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಡಿ’ ವಿಭಾಗದಲ್ಲಿ 8 ಅಂಕದ 6 ಪ್ರಶ್ನೆಗಳಿದ್ದು ಅದರಲ್ಲಿ 4 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ‘ಇ’ ವಿಭಾಗದಲ್ಲಿ 5 ಅಂಕದ 3 ಪ್ರಶ್ನೆಗಳಿದ್ದು ಅದರಲ್ಲಿ 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ.

ಅರ್ಥಶಾಸ್ತ್ರ: ಪ್ರಶ್ನೆ ಪತ್ರಿಕೆಯ ‘ಎ’ ವಿಭಾಗದಲ್ಲಿ 1 ಅಂಕದ 20 ಪ್ರಶ್ನೆಗಳಿದ್ದು (ಬಹು ಆಯ್ಕೆಯ ಪ್ರಶ್ನೆ–5, ಬಿಟ್ಟ ಸ್ಥಳ ಭರ್ತಿ–5, ಹೊಂದಿಸಿ ಬರೆಯುವುದು–5 ಲಘು ಉತ್ತರ –5 ಪ್ರಶ್ನೆಗಳು) ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ‘ಬಿ’ ವಿಭಾಗದಲ್ಲಿ 2 ಅಂಕದ 14 ಪ್ರಶ್ನೆಗಳಿದ್ದು, ಅದರಲ್ಲಿ 9 ಪ್ರಶ್ನೆಗಳಿಗೆ ಉತ್ತರಿಸಬೇಕು. ‘ಸಿ’ ವಿಭಾಗದಲ್ಲಿ 4 ಅಂಕದ 11 ಪ್ರಶ್ನೆಗಳಿದ್ದು ಅದರಲ್ಲಿ 7 ಪ್ರಶ್ನೆಗಳಿಗೆ ಉತ್ತರಿಸಬೇಕು. ‘ಡಿ’ ವಿಭಾಗದಲ್ಲಿ 6 ಅಂಕದ 7 ಪ್ರಶ್ನೆಗಳಿದ್ದು ಅದರಲ್ಲಿ 4 ಪ್ರಶ್ನೆಗಳಿಗೆ ಉತ್ತರಿಸಬೇಕು. ‘ಇ’ ವಿಭಾಗದಲ್ಲಿ 5 ಅಂಕದ 3 ಪ್ರಶ್ನೆಗಳಿದ್ದು, ಅದರಲ್ಲಿ 2 ಪ್ರಶ್ನೆಗಳಿಗೆ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.