
ಪ್ರಜಾವಾಣಿ ವಾರ್ತೆ
ಬೆಂಗಳೂರು: ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾದ ವ್ಯಕ್ತಿ ಜಾಲಹಳ್ಳಿ ಹಾಗೂ ಸುತ್ತಮುತ್ತ ಓಡಾಡುತ್ತಿದ್ದದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.
ಮಾ.17 ರಂದು ಇಂಡೋನೇಷ್ಯಾದಿಂದ ಬಂದಿದ್ದ ವ್ಯಕ್ತಿ ಕೈಗೆ ಮುದ್ರೆ ಹಾಕಲಾಗಿತ್ತು. ನಿಷೇಧಾಜ್ಞೆ ನಡುವೆಯೂ ಆತ ಜಾಲಹಳ್ಳಿ ಬಳಿ ಬುಧವಾರ ಬೆಳಿಗ್ಗೆ ಓಡಾಡುತ್ತಿದ್ದ.
ಆತನ ಕೈ ಮೇಲೆ ಮುದ್ರೆ ನೋಡಿದ್ದ ಪೊಲೀಸರು, ಆತನನ್ನು ಪ್ರಶ್ನಿಸಿದ್ದರು. ನಗರ ಸುತ್ತಲೂ ಬಂದಿರುವುದಾಗಿ ಆತ ಹೇಳಿದ್ದ.
ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಸಾರ್ವಜನಿಕರು ಎಲ್ಲರೂ ಮನೆಯಲ್ಲೇ ಇರಿ. ಯಾರೂ ಹೊರಗಡೆ ಬರಬೇಡಿ' ಎಂದು ಪೊಲೀಸರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.