ADVERTISEMENT

ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನಂ ನಿಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 2:51 IST
Last Updated 11 ಜನವರಿ 2021, 2:51 IST
ಆರ್. ರತ್ನಂ
ಆರ್. ರತ್ನಂ   

ಯಲಹಂಕ:ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನಂ(97) ಶನಿವಾರ ಚೆನ್ನೈನಲ್ಲಿ ನಿಧನರಾದರು.

ರತ್ನಂ ಅವರು ಕಪ್ಪು ಬಿಳುಪು, ಭಲೇ ಜೋಡಿ, ಚದುರಂಗ, ಮನೆಕಟ್ಟಿ ನೋಡು, ಹೊಯ್ಸಳ, ಮಹಾತಪಸ್ವಿ ಸೇರಿದಂತೆ ಕನ್ನಡದ ಹಲವು ಸಿನಿಮಾ, ತೆಲುಗು, ತಮಿಳಿನ 70ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದರು. ಅವರು ರಾಗ ಸಂಯೋಜಿಸಿದ್ದ ‘ಬೆಳೆದಿದೆ ನೋಡಾ ಬೆಂಗಳೂರು ನಗರ’, ‘ಇಲ್ಲಿಗೆ ಋಣವು ತೀರಿತು’, ‘ಹೋಗದಿರೀ ಸೋದರರೆ’, ‘ಅಮ್ಮ ನಿನ್ನ ತೋಳಿನಲ್ಲಿ ಕಂದಾ ನಾನು’ ಮತ್ತಿತರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಉಳಿದಿವೆ.

ರತ್ನಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಸಾಗರ್ ಪ್ರಶಸ್ತಿ, ಅಪ್ಪಾಜಿಗೌಡ ಪ್ರಶಸ್ತಿ ಸೇರಿದಂತೆ ನೂರಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಅವರ ಕೊನೆಯ ಆಸೆಯಂತೆ, ಅಂತ್ಯಸಂಸ್ಕಾರವನ್ನು ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ADVERTISEMENT

ಅವರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.