ಬೆಂಗಳೂರು: ಭಾರತೀಯ ವಾಯುಪಡೆಯು ದೇಸಿಯವಾಗಿ ಅಭಿವೃದ್ಧಿಪಡಿಸಿರುವ ರೇಡಾರ್ ಸಿಮ್ಯುಲೇಟರ್‌ನ ‘ರ‍್ಯಾಡ್‌ಸಿಮ್’ ತಂತ್ರಾಂಶವನ್ನು ಇಂಡಿಯನ್ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಿತು.
ದಮನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ವಾಯುಪಡೆಯ ಸಾಫ್ಟ್‌ವೇರ್ ಡೆವಲಪ್‌ಮೆಂಪ್ ಇನ್‌ಸ್ಟಿಟ್ಯೂಟ್(ಎಸ್‌ಡಿಐ) ಅಭಿವೃದ್ಧಿಪಡಿಸಿರುವ ‘ರ‍್ಯಾಡ್‌ಸಿಮ್’ ಅನ್ನು ಇಂಡಿಯನ್ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಲಾಯಿತು. ಇದನ್ನು ಎರಡೂ ಪಡೆಗಳ ಸಹಭಾಗಿತ್ವದ ಮೈಲುಗಲ್ಲಾಗಿ ಗುರುತಿಸಲಾಗುತ್ತಿದೆ.
‘ರ‍್ಯಾಡ್‌ಸಿಮ್’ ಅನ್ನು ಅತ್ಯುನ್ನತ ವ್ಯವಸ್ಥೆಯಾಗಿ ವಿನ್ಯಾಸಗೊಳಿಸಲಾಗಿದ್ದು, ನೈಜ ರೇಡಾರ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಪರಿಸರಕ್ಕೆ ಅನುಕೂಲಕರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.