ADVERTISEMENT

ರಾಘವೇಶ್ವರ ಶ್ರೀ ಚಾತುರ್ಮಾಸ್ಯ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:21 IST
Last Updated 22 ಜುಲೈ 2021, 20:21 IST
ಚಾತುರ್ಮಾಸ್ಯ ಪೂರ್ವಭಾವಿಯಾಗಿ ಗುರುವಾರ ಮಧ್ಯಾಹ್ನ ರಾಘವೇಶ್ವರ ಶ್ರೀಗಳ ಪುರಪ್ರವೇಶ ನಡೆಯಿತು
ಚಾತುರ್ಮಾಸ್ಯ ಪೂರ್ವಭಾವಿಯಾಗಿ ಗುರುವಾರ ಮಧ್ಯಾಹ್ನ ರಾಘವೇಶ್ವರ ಶ್ರೀಗಳ ಪುರಪ್ರವೇಶ ನಡೆಯಿತು   

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯವರ 28ನೇ ಚಾತುರ್ಮಾಸ್ಯ ಆಚರಣೆಯು ಇದೇ 24ರಿಂದ ಸೆ.20ರವರೆಗೆ ಗಿರಿನಗರದ ಶ್ರೀರಾಮಾಶ್ರಮದಲ್ಲಿ ನಡೆಯಲಿದೆ.

ಚಾತುರ್ಮಾಸ್ಯ ಪೂರ್ವಭಾವಿಯಾಗಿ ಗುರುವಾರ ಮಧ್ಯಾಹ್ನ ಶ್ರೀಗಳ ಪುರಪ್ರವೇಶ ವೈಭವದಿಂದ ನಡೆಯಿತು

ಗುರುಕುಲಗಳ ಬಗ್ಗೆ ಮಾಹಿತಿ ಪ್ರಸಾರ, ಘನ ಪಾರಾಯಣ, ವೇದ ಪಾರಾಯಣ, ಧನ್ವಂತರಿ ಹವನ, ಶ್ರೀಗಳ ವರ್ಧಂತಿ ಉತ್ಸವ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಈ ಅವಧಿಯಲ್ಲಿ ನಡೆಯಲಿವೆ.

ADVERTISEMENT

‘ಅರಿವಿನ ಹಣತೆಯ ಹಚ್ಚೋಣ- ವಿದ್ಯಾವಿಶ್ವವ ಕಟ್ಟೋಣ ಎಂಬ ಧ್ಯೇಯವಾಕ್ಯದೊಂದಿಗೆ ಈ ಚಾತುರ್ಮಾಸ್ಯವನ್ನು ಆಚರಿಸಲಾಗುತ್ತಿದೆ’ ಎಂದು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್‍.ಜಿ. ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಆಚರಣೆಯ ವೇಳೆ, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭಿಕ್ಷಾಸೇವೆ, ಪಾದುಕಾಪೂಜೆಯಂಥ ಧಾರ್ಮಿಕ ವಿಧಿವಿಧಾನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

‘ಚಾತುರ್ಮಾಸ್ಯದಲ್ಲಿ ಸಂಗ್ರಹವಾಗುವ ಮೊತ್ತದಲ್ಲಿ ದೊಡ್ಡ ನಿಧಿಯೊಂದನ್ನು ವಿಶ್ವವಿದ್ಯಾಪೀಠದ ವಾರ್ಷಿಕ ನಿರ್ವಹಣೆಗಾಗಿ ಸಮರ್ಪಿಸಲು ಉದ್ದೇಶಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.