ADVERTISEMENT

ರೈಲು ಎಂಜಿನ್ ಜಖಂ; ಮೂರು ಭಾಗವಾದ ಟಿಪ್ಪರ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 21:44 IST
Last Updated 20 ಸೆಪ್ಟೆಂಬರ್ 2021, 21:44 IST

ಬೆಂಗಳೂರು: ನಗರದ ಹೊರವಲಯದಲ್ಲಿ ಸೋಮವಾರ ರಾತ್ರಿ ಮೈಸೂರು- ಚೆನ್ನೈ ಎಕ್ಸ್‌ಪ್ರೆಸ್ ರೈಲು, ಟಿಪ್ಪರ್ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರೈಲು ಎಂಜಿನ್ ಜಖಂಗೊಂಡಿದ್ದು, ಟಿಪ್ಪರ್ ಮೂರು ಭಾಗವಾಗಿದೆ.

ಲೋಕೋ ಪೈಲೆಟ್ ಸಮಯಪ್ರಜ್ಞೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ರೈಲು ಬರುತ್ತಿದ್ದ ವೇಳೆಯಲ್ಲೇ ಟಿಪ್ಪರ್ ಲಾರಿಯನ್ನು ಹಳಿ ದಾಟಿಸುತ್ತಿದ್ದ ಚಾಲಕ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕಾರ್ಮೆಲ್ ರಾಮ್ ನಿಲ್ದಾಣದಿಂದ ಹೀಲಳಿಗೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಳಿ ವೇಳೆ ರೈಲು ಹೊರಟಿತ್ತು ರಾತ್ರಿ 8.30ರ ಸುಮಾರಿಗೆ ಟಿಪ್ಪರ್ ಅಡ್ಡವಾಗಿ ಬಂದಿತ್ತು. ಅದನ್ನು ಗಮನಿಸಿದ್ದ ಲೋಕೋ ಪೈಲೆಟ್, ತುರ್ತು ಬ್ರೇಕ್‌ ಒತ್ತಿ ದೂರದಿಂದಲೇ ರೈಲು ನಿಲ್ಲಿಸಲು ಯತ್ನಿಸಿದ್ದರು. ವೇಗದ ಮಿತಿ ಕಡಿಮೆಯಾಗುತ್ತಲೇ ರೈಲು ಲಾರಿಗೆ ಡಿಕ್ಕಿ ಹೊಡೆದಿತ್ತು.’ ಎಂದು ಮೂಲಗಳು ಹೇಳಿವೆ.

ADVERTISEMENT

‘ಲಾರಿ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ. ರೈಲಿನಲ್ಲಿ ಸಾಕಷ್ಟು ಪ್ರಯಾಣಿಕರು ಇದ್ದರು. ಲೋಕೋ ಪೈಲೆಟ್ ಬ್ರೇಕ್ ಹಾಕಿದ್ದರಿಂದ ಅವರ ಜೀವಕ್ಕೆ ಯಾವುದೇ ಹಾನಿಯಾಗಿಲ್ಲ.’ ಎಂದೂ ರೈಲ್ವೆ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.