ADVERTISEMENT

ಬೆಂಗಳೂರಿನಲ್ಲಿ ಮಳೆ: ಇನ್ನೂ ಮೂರು ದಿನ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2022, 2:39 IST
Last Updated 13 ನವೆಂಬರ್ 2022, 2:39 IST
ಬೆಂಗಳೂರು ನಗರದ ಲಾಲ್ ಬಾಗ್ ಕೆರೆಯ ಮೇಲೆ ಶನಿವಾರ ತುಂತುರು ಮಳೆ ಸುರಿದ ಪರಿಣಾಮ ಯುವತಿಯರು ತಲೆಯ ಮೇಲೆ ದುಪ್ಪಟ್ಟ ಹೊದ್ದು ಸಾಗಿದರು -ಪ್ರಜಾವಾಣಿ ಚಿತ್ರ/ ರಂಜು ಪಿ
ಬೆಂಗಳೂರು ನಗರದ ಲಾಲ್ ಬಾಗ್ ಕೆರೆಯ ಮೇಲೆ ಶನಿವಾರ ತುಂತುರು ಮಳೆ ಸುರಿದ ಪರಿಣಾಮ ಯುವತಿಯರು ತಲೆಯ ಮೇಲೆ ದುಪ್ಪಟ್ಟ ಹೊದ್ದು ಸಾಗಿದರು -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ದಿನವಿಡೀ ಜಿಟಿ ಜಿಟಿ ಮಳೆ ಸುರಿಯಿತು. ರಾತ್ರಿ ಮಳೆಯು ತುಸು ಬಿರುಸು ಪಡೆಯಿತು.

ವಾಯುಭಾರ ಕುಸಿತದ ಪರಿಣಾಮ ನಗರದಲ್ಲಿ ಚಳಿಯವಾತಾವರಣ ಇತ್ತು. ಉಷ್ಣಾಂಶ ಕುಸಿದಿದ್ದರಿಂದ ಪರಿಣಾಮ ಮೈಕೊರೆಯುವ ಚಳಿಯ ಅನುಭವ ಉಂಟಾಯಿತು.

ಶುಕ್ರವಾರ ರಾತ್ರಿಯಿಂದಲೇ ಜಿಟಿಜಿಟಿ ಮಳೆ ಸುರಿಯಲು ಆರಂಭವಾಗಿತ್ತು. ಅದು ಶನಿವಾರ ದಿನವಿಡೀ ಮುಂದುವರಿದಿತ್ತು.

ADVERTISEMENT

ವಾತಾವರಣದಲ್ಲಿ ದಿಢೀರ್‌ ಬದಲಾವಣೆ ಕಂಡುಬಂಡಿದ್ದ ಕಾರಣ ವಾರಾಂತ್ಯವಾದ ಶನಿವಾರವೂ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಜನರ ಓಡಾಟ ಕಡಿಮೆಯಿತ್ತು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಮಳೆಯಾಗುತ್ತಿದೆ. ಅದರ ಪರಿಣಾಮ ನಗರಕ್ಕೂ ತಟ್ಟಿದ್ದು ಮಳೆ ಸುರಿಯುತ್ತಿದೆ. ನಗರದಲ್ಲಿ ಇನ್ನೂ ಮೂರು ದಿನ ಇದೇರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿಯಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಠಾಂಶ 18 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಭಾನುವಾರ ನಗರದಲ್ಲಿ ಗರಿಷ್ಠ ಉಷ್ಣಾಂಶ 24 ಡಿಗ್ರಿ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ಧಾರೆ.

ಮಲ್ಲೇಶ್ವರ, ಬ್ಯಾಟರಾಯನಪುರ, ಪೀಣ್ಯ ಕೈಗಾರಿಕಾ ವಲಯ, ಜಾಲಹಳ್ಳಿ, ಯಲಹಂಕ, ಕೆಂಗೇರಿ, ಕೆಂಗೇರಿ ಉಪನಗರ, ರಾಜಾಜಿನಗರ, ಹೆಬ್ಬಾಳ, ಸದಾಶಿವನಗರ, ವಿಜಯನಗರ, ರಾಜರಾಜೇಶ್ವರಿ ನಗರ, ಟಿ.ದಾಸರಹಳ್ಳಿ, ಸುಂಕದಕಟ್ಟೆ, ಯಶವಂತಪುರ, ಹೆಗ್ಗನಹಳ್ಳಿ, ಹೆಬ್ಬಾಳ, ರಾಜಗೋಪಾಲನಗರ, ಶ್ರೀರಾಮಪುರ, ಸುಬ್ರಹ್ಮಣ್ಯ ನಗರ, ಚಂದ್ರಲೇಔಟ್, ಕಲಾಸಿಪಾಳ್ಯ, ಚಾಮರಾಜಪೇಟೆ, ಉಪ್ಪಾರಪೇಟೆ, ಜೆ.ಜೆ.ನಗರ, ಮಾಗಡಿ ರಸ್ತೆ, ವಿಜಯನಗರ... ಹೀಗೆ ನಗರದ ಎಲ್ಲೆಡೆ ಜಿಟಿಜಿಟಿ ಮಳೆ ಸುರಿಯಿತು. ಎಲ್ಲೆಡೆಯೂ ಗಾಳಿ ಬೀಸುತ್ತಿದ್ದರಿಂದ ಚಳಿಯ ವಾತಾವರಣ ಇತ್ತು. ಸ್ವೇಟರ್‌ ಹಾಗೂ ಟೋಪಿ ಧರಿಸಿ ಸಂಚರಿಸಿದರು. ಮಳೆಯಿಂದ ರಕ್ಷಣೆ ಪಡೆಯಲು ಕೊಡೆ ಹಿಡಿದು ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.