ADVERTISEMENT

‘ಪದವಿ, ಪ್ರಸಿದ್ಧಿಯ ವ್ಯಾಮೋಹಕ್ಕೆ ಸಿಲುಕದಿರಿ’

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:34 IST
Last Updated 1 ಜೂನ್ 2019, 20:34 IST
ಕಾರ್ಯಕ್ರಮದಲ್ಲಿ ಎಸ್‌.ಕಾಂತಾ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಶಿವಾನಂದ ಕಾಪಸೆ, ಪ್ರೊ.ಎಂ.ಕೆ.ಸಿ ನಾಯರ್, ಡಾ.ಎಲ್‌ ನಾಗೇಶ್‌, ಕುಲಪತಿ ಡಾ.ಎಸ್‌.ಸಚ್ಚಿದಾನಂದ ಇದ್ದಾರೆ – ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಎಸ್‌.ಕಾಂತಾ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಶಿವಾನಂದ ಕಾಪಸೆ, ಪ್ರೊ.ಎಂ.ಕೆ.ಸಿ ನಾಯರ್, ಡಾ.ಎಲ್‌ ನಾಗೇಶ್‌, ಕುಲಪತಿ ಡಾ.ಎಸ್‌.ಸಚ್ಚಿದಾನಂದ ಇದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವೈದ್ಯಕೀಯ ವಿದ್ಯಾರ್ಥಿಗಳು ಪದವಿಯ ಮೋಹದಿಂದ ಹಾಗೂ ಪ್ರಸಿದ್ಧಿ ಗಳಿಸುವ ಉದ್ದೇಶದಿಂದ ಕೆಲಸ ಮಾಡಬಾರದು. ಮಾಡುವ ಕೆಲಸವು ಜನರಿಗೆ ಫಲಕಾರಿಯಾಗಬೇಕು. ಸಮಾಜಕ್ಕೆ ಉಪಯೋಗವಾಗಬೇಕು’ ಎಂದು ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಂ.ಕೆ.ಸಿ ನಾಯರ್‌ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 23ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಸಂವಹನದ ಮಹತ್ವದ ಬಗ್ಗೆ ವಿವರಿಸಿದ ಅವರು, ‘ಸಂವಹನದಲ್ಲಿ ದೋಷವಿದ್ದರೆ ವಿದ್ಯಾರ್ಥಿಗಳು ವಿಷಯವನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಪಾಠವನ್ನು ಮುಗಿಸಿದ ಬಳಿಕ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಬೇಡಿ. ಅದರ ಬದಲು ಅವರಿಗೆ ಏನು ಅರ್ಥವಾಗಿದೆಯೋ ಅದನ್ನು ಪಟ್ಟಿ ಮಾಡುವಂತೆ ಸೂಚಿಸಿ. ಇದು ವಿಷಯವನ್ನು ಮನದಟ್ಟು ಮಾಡಲು ನೆರ
ವಾಗುತ್ತದೆ’ ಎಂದು ಸಲಹೆ ನೀಡಿದರು.

ADVERTISEMENT

ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಎಸ್‌.ಕಾಂತ ಹಾಗೂ ದಯಾನಂದ ಸಾಗರ ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಲ್‌.ನಾಗೇಶ್‌ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.