
ಪೀಣ್ಯ ದಾಸರಹಳ್ಳಿ:‘ಕರುನಾಡಲ್ಲಿ ಅರಣ್ಯ ಸಂಪತ್ತು, ಖನಿಜ ಸಂಪತ್ತು, ನದಿಗಳು, ಕಣಿವೆಗಳು, ಬೆಟ್ಟಗುಡ್ಡಗಳು ಸಮೃದ್ಧಿಯಿಂದ ಇದ್ದು, ನಾಡಿನ ಸೊಬಗನ್ನು ಹೆಚ್ಚಿಸಿವೆ’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಹಾವನೂರು ಬಡಾವಣೆಯ ಅಸೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ 70ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ 'ಅಸೆಂಟ್ ಕನ್ನಡ ಕಲರವ -2025' ಎಂಬ ಶೀರ್ಷಿಕೆಯಡಿ ಎರಡು ದಿನಗಳ ಕರ್ನಾಟಕ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ದಾರ್ಶನಿಕರ, ಸಾಹಿತಿಗಳ, ಚಿಂತಕರ ಮತ್ತು ವಿಜ್ಞಾನಿಗಳನ್ನು ಕಂಡ ಈ ಭೂಮಿ ಪುಣ್ಯಭೂಮಿ ಎಂದು ಬಣ್ಣಿಸಿದರು.
ಕಾಲೇಜಿನಿಂದ ಪ್ರಾರಂಭವಾದ ಮೆರವಣಿಗೆ ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ನೂರಾರು ವಿದ್ಯಾರ್ಥಿನಿಯರು ಕಳಸ ಹೊತ್ತು ಹೆಸರಘಟ್ಟ ಮುಖ್ಯ ರಸ್ತೆಯಿಂದ ಬಾಗಲಗುಂಟೆಯ ಆಟದ ಮೈದಾನ, ಮಾರಮ್ಮನ ದೇವಸ್ಥಾನ, ಹಾವನೂರು ಬಡಾವಣೆಯ ಮುಖ್ಯ ರಸ್ತೆಯಲ್ಲಿ ಸಾಗಿ ಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆ ಕಾರ್ಯಕ್ರಮದಲ್ಲಿ ಸಾಹಿತಿ ಕಾಳೇಗೌಡ ನಾಗವಾರ ಮಾತನಾಡಿದರು. ಪ್ರಾಂಶುಪಾಲ ಬಿ.ಎಂ. ವೆಂಕಟೇಶ್, ಚಿತ್ರನಟ ಹೊನ್ನವಳ್ಳಿ ಕೃಷ್ಣ, ಕಿರುತೆರೆ ನಟ ಪುನೀತ ಗೌಡ, ಪ್ರಾಧ್ಯಾಪಕರಾದ ಜಯಶಂಕರ ಹಲಗೂರು, ಶ್ವೇತಾ ವೆಂಕಟೇಶ್, ರಾಘವೇಂದ್ರ ಮಸ್ಕಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.