ADVERTISEMENT

‘ಪ್ರಜಾವಾಣಿ’ ಪತ್ರಿಕೆ ವಿತರಿಸಿ ರಾಜ್ಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 20:27 IST
Last Updated 22 ನವೆಂಬರ್ 2020, 20:27 IST
ಪ್ರಜಾವಾಣಿ ಪತ್ರಿಕೆ ವಿತರಿಸಿದ ಆಟೊ ಚಾಲಕರು. ಬಿಜೆಪಿ ಮುಖಂಡ ಮುರಳೀಧರ್ ಇದ್ದಾರೆ
ಪ್ರಜಾವಾಣಿ ಪತ್ರಿಕೆ ವಿತರಿಸಿದ ಆಟೊ ಚಾಲಕರು. ಬಿಜೆಪಿ ಮುಖಂಡ ಮುರಳೀಧರ್ ಇದ್ದಾರೆ   

ಬೊಮ್ಮನಹಳ್ಳಿ: ಬನ್ನೇರುಘಟ್ಟ ರಸ್ತೆ ಅರಕೆರೆಯಲ್ಲಿ ಆಟೊ ಚಾಲಕರು ‌‘ಪ್ರಜಾವಾಣಿ’ ಪತ್ರಿಕೆ ವಿತರಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದರು.

ಕೃಷ್ಣಕುಟೀರ ಸರ್ಕಲ್‌ನಲ್ಲಿ ಕನ್ನಡ ಧ್ವಜ ಹಾರಿಸಿ, ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿದ ಆಟೊ ಚಾಲಕರು, ಸಿಹಿ ಹಂಚುವ ಜತೆಗೆ ಸಾರ್ವಜನಿಕರಿಗೆ ಪ್ರಜಾವಾಣಿ ಪತ್ರಿಕೆಯನ್ನು ಉಚಿತವಾಗಿ ನೀಡಿ ಖುಷಿಪಟ್ಟರು.

‘ಕನ್ನಡ ನಾಡು ನುಡಿಗೆ ಪ್ರಜಾವಾಣಿ ದೊಡ್ಡ ಕೊಡುಗೆ ನೀಡಿದೆ. ಪತ್ರಿಕೆಯ ಜತೆ ನಮಗೆ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿಯೇ ನಾವು ಪತ್ರಿಕೆ ಹಂಚಿ ರಾಜ್ಯೋತ್ಸವ ಆಚರಿಸಿದೆವು‘ ಎಂದು ಆಟೊ ಚಾಲಕರು ಹೇಳಿದರು. ಮುಖ್ಯ ಅತಿಥಿ ಬಿಜೆಪಿ ಮುಖಂಡ ಮುರಳೀಧರ್ ‘ರಾಜ್ಯೋತ್ಸವವನ್ನು ಹೀಗೂ ಆಚರಿಸಬಹುದು ಎಂದು ಆಟೊ ಚಾಲಕರು ತೋರಿಸಿಕೊಟ್ಟಿದ್ದಾರೆ. ಪತ್ರಿಕೆ ದೀರ್ಘ ಕಾಲದಿಂದ ಓದುಗರ ವಿಶ್ವಾಸ ಉಳಿಸಿಕೊಂಡು ಬಂದಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.