
ಬೆಂಗಳೂರು: ಭಾರತದ ಪ್ರಮುಖ ಏರೋಸ್ಪೇಸ್ ಕಂಪನಿಗಳಲ್ಲಿ ಒಂದಾದ ರ‍್ಯಾಂಗ್‌ಸನ್ಸ್ ಏರೋಸ್ಪೇಸ್ ಮತ್ತು ಪ್ರಮುಖ ಬ್ಯಾಟರಿ ತಯಾರಕರಾದ ಎಕ್ಸೈಡ್ ಎನರ್ಜಿ ಕಂಪನಿಯು ಜಿಟಿಟಿಸಿಯಲ್ಲಿ ತರಬೇತಿ ಪಡೆದಿರುವ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿದೆ.
ಈ ಕುರಿತು ಕೌಶಲ ಅಭಿವೃದ್ಧಿ, ಜೀವನೋಪಾಯ ಸಚಿವ ಶರಣಪ್ರಕಾಶ ಪಾಟೀಲ ಅವರ ಸಮ್ಮುಖದಲ್ಲಿ ರಾಜಾಜಿನಗರದ ಜಿಟಿಟಿಸಿ ಕ್ಯಾಂಪಸ್‌ನಲ್ಲಿ ಬುಧವಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಟ್ಯೂಬ್‌ಗಳು ಮತ್ತು ನಾಳಗಳು, ಉಪಗ್ರಹ ಸಂವಹನ ವ್ಯವಸ್ಥೆ, ಎಐ-ಚಾಲಿತ ಸಾಫ್ಟ್‌ವೇರ್, ರಕ್ಷಣಾ ಮತ್ತು ಏರೋಸ್ಪೇಸ್‌ಗಾಗಿ ಎಂಬೆಡೆಡ್ ಸಿಸ್ಟಮ್‌ಗಳನ್ನು ತಯಾರಿಸುವ ರ‍್ಯಾಂಗ್‌ಸನ್ಸ್ ಏರೋಸ್ಪೇಸ್, ಈಗ ಜಿಟಿಟಿಸಿ ವಿದ್ಯಾರ್ಥಿಗಳನ್ನು ನೇಮಿಸಿಕೊಳ್ಳುತ್ತಿದೆ ಎಂದು ಮಾನವ ಸಂಪನ್ಮೂಲ ಅಧಿಕಾರಿ ಸಂದೇಶ್ ಪಿ. ಸತೀಶ್ ತಿಳಿಸಿದರು
‘ವೆಲ್ಡಿಂಗ್, ಸಿಎನ್‌ಸಿ, ಸೆಟ್ಟಿಂಗ್ ಮತ್ತು ಪ್ರೋಗ್ರಾಮಿಂಗ್, ಲೇಸರ್ ಕಟಿಂಗ್, ಫಿಟ್ಟಿಂಗ್, ಶೀಟ್ ಮೆಟಲ್, ಟೂಲಿಂಗ್ ಮತ್ತು ವಿನ್ಯಾಸ ಎಂಜಿನಿಯರಿಂಗ್, ಗುಣಮಟ್ಟ ನಿಯಂತ್ರಣ ಮತ್ತು ಪರೀಕ್ಷೆ ಸೇರಿದಂತೆ 35 ವಿಭಾಗಗಳಲ್ಲಿ ಸುಮಾರು 200 ವೃತ್ತಿಪರರನ್ನು ನೇಮಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ತರಬೇತಿ ಪಡೆದಿರುವವರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಎಕ್ಸೈಡ್ ಎನರ್ಜಿಯ ಉತ್ಪಾದನಾ ವಿಭಾಗದ ಎಂಜಿನಿಯರಿಂಗ್ ಮುಖ್ಯಸ್ಥ ಸುಭಾಷ್ ಶ್ರೀನಿವಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.