ADVERTISEMENT

ಬೆಂಗಳೂರು: Rapido ಆಟೊಗಳ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 20:33 IST
Last Updated 19 ಜುಲೈ 2023, 20:33 IST
ರ್‍ಯಾಪಿಡೊ ಆಟೊಗಳ ಮೇಲೆ ದಾಳಿ ನಡೆಸಿ ಕರ್ಟನ್‌ ಹರಿದು ಹಾಕಿರುವ ದೃಶ್ಯ.
ರ್‍ಯಾಪಿಡೊ ಆಟೊಗಳ ಮೇಲೆ ದಾಳಿ ನಡೆಸಿ ಕರ್ಟನ್‌ ಹರಿದು ಹಾಕಿರುವ ದೃಶ್ಯ.   

ಬೆಂಗಳೂರು: ನಗರದ ಎಚ್‌ಎಸ್‌ಆರ್‌ ಲೇಔಟ್‌ನ 5ನೇ ಮುಖ್ಯರಸ್ತೆಯಲ್ಲಿರುವ ರ್‍ಯಾಪಿಡೊ ಕಚೇರಿ ಎದುರಿನ ರಸ್ತೆಯಲ್ಲಿ ನಿಲುಗಡೆ ಮಾಡಲಾಗಿದ್ದ ರ್‍ಯಾಪಿಡೊ ಆಟೊಗಳ ಮೇಲೆ ಸಾರಥಿ ಆಟೊ ಚಾಲಕರು ದಾಳಿ ನಡೆಸಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.

ರ್‍ಯಾಪಿಡೊ ಆಟೊಗಳ ಚಾಲಕರಿಗೆ ಸೀಟ್‌ ಬೆಲ್ಟ್‌ ಹಾಗೂ ಸೈಡ್‌ ಕರ್ಟನ್‌ ವಿತರಣೆ ಮಾಡಲಾಗುತ್ತಿತ್ತು. ಆಗ ಏಕಾಏಕಿ ದಾಳಿ ನಡೆಸಿದ್ದಾರೆ ಎಂದು ರ್‍ಯಾಪಿಡೊ ಸಂಸ್ಥೆಯವರು ದೂರು ನೀಡಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಲವು ವಸ್ತುಗಳನ್ನು ಕಳವು ಮಾಡಿದ್ದಾರೆ. ಅಲ್ಲದೇ ಆಟೊಗಳ ಮೇಲಿನ ಕರ್ಟನ್‌ ಹರಿದು ಹಾಕಿದ್ದಾರೆ. ₹ 1.40 ಲಕ್ಷ ಮೌಲ್ಯದ ರೇನ್‌ ಕರ್ಟನ್‌, ಸೀಟ್‌ ಬೆಲ್ಟ್‌ಗೆ ಹಾನಿಯಾಗಿದೆ ಎಂದು ಸಂಸ್ಥೆಯ ರೆಡ್ಡಿಪ್ರಸಾದ್‌ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.