ADVERTISEMENT

ರಾಯದುರ್ಗ: ಆ.8,9ಕ್ಕೆ ರೈಲು ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 16:06 IST
Last Updated 25 ಜುಲೈ 2024, 16:06 IST
ರೈಲು (ಸಾಂದರ್ಭಿಕ ಚಿತ್ರ)
ರೈಲು (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಾಯದುರ್ಗ ಯಾರ್ಡ್‌ನಲ್ಲಿ ಎರಡನೇ ಹಂತದ ಎಂಜಿನಿಯರಿಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್‌ 8 ಮತ್ತು 9ರಂದು ರೈಲು ಸಂಚಾರ ವ್ಯತ್ಯಯಗೊಳ್ಳಲಿದೆ.

ಆ.8ರಂದು ಚಿಕ್ಕಜಾಜೂರು-ಗುಂತಕಲ್ ಡೈಲಿ ಪ್ಯಾಸೆಂಜರ್ ವಿಶೇಷ ರೈಲು, ಗುಂತಕಲ್-ಚಿಕ್ಕಜಾಜೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.

ಆ. 9ರಂದು ಕೆಎಸ್ಆರ್ ಬೆಂಗಳೂರು-ಹೊಸಪೇಟೆ ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಮತ್ತು ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ವಿಶೇಷ ರೈಲು ಚಿಕ್ಕಜಾಜೂರು, ದಾವಣಗೆರೆ, ಅಮರಾವತಿ ಕಾಲೊನಿ, ಹೊಸಪೇಟೆ ಮಾರ್ಗದ ಮೂಲಕ ಸಂಚರಿಸಲಿದೆ. ಚಿತ್ರದುರ್ಗ–ತೋರಣಗಲ್ಲು ನಿಲ್ದಾಣಗಳ ನಡುವೆ ನಿಗದಿತ ನಿಲುಗಡೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.