ಬೆಂಗಳೂರು: ‘ದೇಶದ ಸಮಗ್ರ ಪರಿವರ್ತನೆಯಲ್ಲಿ ಶಿಕ್ಷಣದ ಪಾತ್ರ ಬಹಳ ಮುಖ್ಯವಾಗಿದ್ದು, ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ’ ಎಂದು ಪ್ರಥಮ್ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಕ್ಮಿಣಿ ಬ್ಯಾನರ್ಜಿ ಹೇಳಿದರು.
ಐಐಎಂಬಿ 51ನೇ ಸಂಸ್ಥಾಪನ ದಿನದಂದು ‘ಇಂದಿನ ಭಾರತದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಅವಕಾಶಗಳು ಮತ್ತು ಸವಾಲುಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.
‘ಪ್ರತಿಯೊಬ್ಬ ಮಕ್ಕಳೂ ದೇಶದ ಪ್ರಗತಿಗೆ ಹೇಗೆ ಕೊಡುಗೆ ನೀಡುತ್ತಾರೆ ಎಂಬುದು ಮುಖ್ಯ. ಸರ್ಕಾರವು ಹೊಸ ಶಿಕ್ಷಣ ನೀತಿ ರೂಪಿಸಿದೆ. ಕೋವಿಡ್ ನಂತರ ಶಾಲಾ ದಾಖಲಾತಿ ಹೆಚ್ಚುತ್ತಿದೆ. ಓದುವ ಸಾಮರ್ಥ್ಯ ಮತ್ತು ಸಂಖ್ಯೆಗಳ ಜ್ಞಾನದ ವಿಷಯದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ವೇಗಗೊಳಿಸಲು ಈಗ ಹೆಚ್ಚಿನ ಮೌಲ್ಯವರ್ಧನೆ ಅಗತ್ಯವಿದೆ’ ಎಂದು ತಿಳಿಸಿದರು.
ಐಐಎಂಬಿ ನಿರ್ದೇಶಕ ಪ್ರೊ.ರಿಷಿಕೇಷ್ ಟಿ.ಕೃಷ್ಣ ಮಾತನಾಡಿ, ‘ಐದು ವರ್ಷಗಳ ಅವಧಿಯಲ್ಲಿ ₹ 13 ಕೋಟಿ ವೆಚ್ಚದಲ್ಲಿ ಎನ್‌ಎಸ್‌ಆರ್‌ಸಿಇಎಲ್‌ನಲ್ಲಿ ಫಿನ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಅನುಮೋದಿಸಿದೆ’ ಎಂದರು.
ಐಐಎಂಬಿ ಆಡಳಿತ ಮಂಡಳಿ ಸದಸ್ಯೆ ಪ್ರೊ.ಮಾಳವಿಕಾ ಆರ್. ಹರಿತಾ ಮಾತನಾಡಿದರು. ಹಳೆ ವಿದ್ಯಾರ್ಥಿಗಳಿಗೆ ಸೇವಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.